ಮಹಾರಾಷ್ಟ್ರ ರಾಜ್ಯ ಹೆದ್ದಾರಿಗಳು ಇನ್ನೆರಡು ದಿನ ಟೋಲ್ ಮುಕ್ತ

By Suvarna Web DeskFirst Published Nov 9, 2016, 1:43 PM IST
Highlights

ರೂ.500 ಹಾಗೂ ರೂ.1000 ನೋಟುಗಳ ರದ್ದಿನ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ರಸ್ತೆಗಳು ನ.11 ರ ಮಧ್ಯರಾತ್ರಿವರೆಗೆ ಟೋಲ್ ಮುಕ್ತಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಮುಂಬೈ (ನ.09): ರೂ.500 ಹಾಗೂ ರೂ.1000 ನೋಟುಗಳ ರದ್ದಿನ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ರಸ್ತೆಗಳು ನ.11 ರ ಮಧ್ಯರಾತ್ರಿವರೆಗೆ ಟೋಲ್ ಮುಕ್ತಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ರೂ.500 ಹಾಗೂ ರೂ.1000 ನೋಟುಗಳನ್ನು ರದ್ದುಪಡಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ತೊಂದರೆಯಾಗಬಾರದೆಂಬ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ 72

ಗಂಟೆಗಳ ಕಾಲ ರಸ್ತೆಯನ್ನು ಟೋಲ್ ಮುಕ್ತಗೊಳಿಸಿದೆ.

ಅದೇ ರೀತಿ ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್ ಗಳು ಈ ನೋಟುಗಳನ್ನು ಸ್ವೀಕರಿಸಲಿವೆ. ರೈಲ್ವೇ ಟಿಕೆಟ್ ಬುಕಿಂಗ್ ಕೌಂಟರ್, ಏರ್ ಟಿಕೆಟ್ ಕೌಂಟರ್, ಸರ್ಕಾರಿ ಬಸ್ ಗಳು ನ.11 ರ ಮಧ್ಯರಾತ್ರಿವರೆಗೆ ಹಳೆ ನೋಟುಗಳನ್ನು ಸ್ವೀಕರಿಸಲಿವೆ.

click me!