ಮೀಸಲಾತಿ ಸೌಲಭ್ಯ ವಂಚಿತ ಬ್ರಾಹ್ಮಣರು, ವೈಶ್ಯರು ಸೇರಿದಂತೆ ಎಲ್ಲರಿಗೂ ಮೀಸಲು ಭಾಗ್ಯ: ಸಿದ್ದರಾಮಯ್ಯ

Published : Jun 06, 2017, 10:19 PM ISTUpdated : Apr 11, 2018, 01:04 PM IST
ಮೀಸಲಾತಿ ಸೌಲಭ್ಯ ವಂಚಿತ ಬ್ರಾಹ್ಮಣರು, ವೈಶ್ಯರು ಸೇರಿದಂತೆ ಎಲ್ಲರಿಗೂ ಮೀಸಲು ಭಾಗ್ಯ: ಸಿದ್ದರಾಮಯ್ಯ

ಸಾರಾಂಶ

ಮೀಸಲಾತಿ ಸೌಲಭ್ಯದಿಂದ ದೂರವಿರುವ ಬ್ರಾಹ್ಮಣರು, ವೈಶ್ಯರು ಸೇರಿದಂತೆ ವಿವಿಧ ಮೇಲ್ಜಾತಿಗಳ ಬಡವರಿಗೂ ಮೀಸಲು ಸೌಲಭ್ಯ ಒದಗಿಸುವ ಕುರಿತು ಸ್ಥೂಲ ಚಿಂತನೆಯೊಂದನ್ನು ಸರ್ಕಾರ ಹೊಂದಿದೆ. ಆದರೆ, ಜಾತಿ ಸಮೀಕ್ಷೆಯ ನಂತರ ಈ ಬಗ್ಗೆ ಖಚಿತ ನಿರ್ಧಾರವಾಗಲಿದೆ.

ಬೆಂಗಳೂರು (ಜೂ.06):  ಮೀಸಲಾತಿ ಸೌಲಭ್ಯದಿಂದ ದೂರವಿರುವ ಬ್ರಾಹ್ಮಣರು, ವೈಶ್ಯರು ಸೇರಿದಂತೆ ವಿವಿಧ ಮೇಲ್ಜಾತಿಗಳ ಬಡವರಿಗೂ ಮೀಸಲು ಸೌಲಭ್ಯ ಒದಗಿಸುವ ಕುರಿತು ಸ್ಥೂಲ ಚಿಂತನೆಯೊಂದನ್ನು ಸರ್ಕಾರ ಹೊಂದಿದೆ. ಆದರೆ, ಜಾತಿ ಸಮೀಕ್ಷೆಯ ನಂತರ ಈ ಬಗ್ಗೆ ಖಚಿತ ನಿರ್ಧಾರವಾಗಲಿದೆ.
 
ರಾಜ್ಯದಲ್ಲಿ ಅಹಿಂದ ಮಾತ್ರವಲ್ಲದೆ ಮೇಲ್ವರ್ಗಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳೂ ಮೀಸಲು ಸೌಲಭ್ಯ ಅನುಭವಿಸುತ್ತಿವೆ. ಆದರೆ ಬ್ರಾಹ್ಮಣ ಮತ್ತು ವೈಶ್ಯ ಸೇರಿದಂತೆ ಕೆಲವೇ ಕೆಲವು ಜಾತಿಗಳು ಮಾತ್ರ ಮೀಸಲು ಸೌಲಭ್ಯದಿಂದ ದೂರ ಉಳಿದಿವೆ. ಈಗ ಅವುಗಳಿಗೂ ಯಾವುದಾದರೂ ರೀತಿಯಲ್ಲಿ ಮೀಸಲು ಸೌಲಭ್ಯ ನೀಡಿದರೆ ಅವರನ್ನೂ ಕಾಂಗ್ರೆಸ್ ಪರವಾಗಿ ಸೆಳೆದಂತಾಗುತ್ತದೆ. ಹಾಗೆಯೇ ಇದು ದೇಶದಲ್ಲೇ ಕ್ರಾಂತಿ ಎನ್ನುವ ನೀತಿಯಾಗುತ್ತದೆ. ಇದನ್ನೇಕೆ ಪ್ರಯೋಗಿಸಬಾರದು ಎನ್ನುವ ಚಿಂತನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಂದ ನಂತರ ನಿರ್ಧರಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಏಕೆಂದರೆ, ಮೊದಲಿಗೆ ವರದಿಯನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಯಾವ ಜನಾಂಗ ಎಷ್ಟು ಸಂಖ್ಯೆಯಲ್ಲಿದೆ, ಅವುಗಳ ಸ್ಥಿತಿ ಹೇಗಿದೆ ಎನ್ನುವುದನ್ನು ಆ ಸಮುದಾಯಗಳಿಗೆ ಅರ್ಥ ಮಾಡಿಸಬೇಕಿದೆ. ಆನಂತರ ಆ ಜನಾಂಗಗಳು ಪ್ರತಿಕ್ರಿಯಿಸುವ ರೀತಿಯನ್ನೂ ಸರ್ಕಾರ ಗಮನಿಸಬೇಕಿದೆ. ಆದ್ದರಿಂದ ಜಾತಿ ಗಣತಿ ವರದಿ ಬಿಡುಗಡೆ ನಂತರ ಇದಕ್ಕೊಂದು ಸ್ಪಷ್ಟ ರೂಪ ನೀಡಿ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸಲು ಸಿದ್ದರಾಮಯ್ಯ ಆಲೋಚಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!