ವಿಜಯ್ ರಾಘವೇಂದ್ರ ಬಿಟ್ಟು ಉಳಿದ ವಿಜೇತರಲ್ಲಿ ಒಂದೇ ಸಾಮ್ಯತೆ :ಏಕೆ ಗೊತ್ತಾ ?

Published : Jan 30, 2017, 04:22 PM ISTUpdated : Apr 11, 2018, 12:59 PM IST
ವಿಜಯ್ ರಾಘವೇಂದ್ರ ಬಿಟ್ಟು ಉಳಿದ ವಿಜೇತರಲ್ಲಿ ಒಂದೇ ಸಾಮ್ಯತೆ :ಏಕೆ ಗೊತ್ತಾ ?

ಸಾರಾಂಶ

ಆದರೆ ಬಿಗ್ ಬಾಸ್ 4 ಆವೃತ್ತಿಗಳಲ್ಲಿನ ಮೂರರಲ್ಲಿ ಆಗಿರುವ ವಿಶೇಷವನ್ನು ವೀಕ್ಷಕರು ಗಮನಿಸಿದಂತಿಲ್ಲ.  ವಿಜೇತರನ್ನು ಘೋಷಿಸುವುದಕ್ಕೆ ಇಬ್ಬರು ಸ್ಪರ್ಧಿಗಳನ್ನು ನಿರೂಪಕ ಸುದೀಪ್ ಅವರು ವೇದಿಕೆಗೆ ಕರೆತರುತ್ತಾರೆ.

ನಿನ್ನೆಯಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 4 ರ ಗೆಲುವಿನ ಪಟ್ಟವನ್ನು ಪ್ರಥಮ್ ಅಲಂಕರಿಸಿದ್ದಾರೆ. ಪ್ರತಿಯೊಂದು ಬಿಗ್ ಬಾಸ್ ಆವೃತ್ತಿಯಲ್ಲೂ ಸ್ಪರ್ಧಿಗಳು, ಟಾಸ್ಕ್ ಹಾಗೂ ಇನ್ನಿತರ ಮನರಂಜನೆಗಳಲ್ಲಿ ಹಲವು ವಿಶೇಷತೆಯಿರುತ್ತದೆ. ವಿವಾದವಿರದ ಬಿಗ್ ಬಾಸ್ ಆವೃತ್ತಿಗಳೆ ಇಲ್ಲ ಎನ್ನಬಹುದು. ಒಂದೊಂದು ಸೀಸನ್'ನಲ್ಲೂ ಯಾವುದಾದರೊಂದು ವಿವಾದ ಮೆತ್ತಿಕೊಂಡೆ ಇರುತ್ತದೆ. ಆದರೆ ಇವೆಲ್ಲವೂ ಮನರಂಜನೆಯ ಭಾಗಗಳಾಗಿವೆ ವಿನಃ ಮತ್ತೇನಿಲ್ಲ.

ಆದರೆ ಬಿಗ್ ಬಾಸ್ 4 ಆವೃತ್ತಿಗಳಲ್ಲಿನ ಮೂರರಲ್ಲಿ ಆಗಿರುವ ವಿಶೇಷವನ್ನು ವೀಕ್ಷಕರು ಗಮನಿಸಿದಂತಿಲ್ಲ.  ವಿಜೇತರನ್ನು ಘೋಷಿಸುವುದಕ್ಕೆ ಇಬ್ಬರು ಸ್ಪರ್ಧಿಗಳನ್ನು ನಿರೂಪಕ ಸುದೀಪ್ ಅವರು ವೇದಿಕೆಗೆ ಕರೆತರುತ್ತಾರೆ. ಇಬ್ಬರು ಸುದೀಪ್ ಅವರ ಬಲ ಹಾಗೂ ಎಡಭಾಗ ನಿಂತಿರುತ್ತಾರೆ. ಕೊನೆ ಕ್ಷಣದಲ್ಲಿ ವಿಜೇತರಾದ ಒಬ್ಬರ ಕೈಯನ್ನು ಮೇಲಕ್ಕೆತ್ತುವ ಮೂಲಕ ಸುದೀಪ್ ಟ್ರೋಫಿಯನ್ನು ನೀಡುತ್ತಾರೆ.

4 ಆವೃತ್ತಿಗಳಲ್ಲಿ ಮೊದಲ ಆವೃತ್ತಿಯಲ್ಲಿ ವಿಜೇತರಾತ ವಿಜಯ್ ರಾಘವೇಂದ್ರ ಅವರನ್ನು ಹೊರತುಪಡಿಸಿ ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್ ಅವರಲ್ಲಿ ಒಂದೇ ಸ್ವಾಮತೆಯಿದೆ. ಈ ಮೂವರು ಸುದೀಪ್ ಅವರ ಎಡಭಾಗದಲ್ಲಿಯೇ ನಿಂತಿರುವುದು. ವಿಜಯ್ ರಾಘವೇಂದ್ರ ಮಾತ್ರ ಬಲ ಭಾಗದಲ್ಲಿ ನಿಂತಿದ್ದರು. ಮೇಲಿನ ಚಿತ್ರವನ್ನು ನೋಡಿದರೆ ಈ ಹೋಲಿಕೆ ಕಾಣುತ್ತದೆ.         

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನ: ಸ್ನೇಹಿತರಿಂದಲೇ ರೌಡಿ ಶೀಟರ್‌ ಜೆಸಿಬಿ ಮಂಜು ಹತ್ಯೆಗೆ ಯತ್ನ, ರಕ್ತದ ಮಡುವಲ್ಲಿ ನರಳಾಡಿದ ಮಂಜ
ಪ್ರತಿ ಟ್ವೀಟ್‌ಗೆ ಗರಿಷ್ಠ ಲೈಕ್ಸ್ , ಭಾರತದಲ್ಲಿ ನಂ.1 ಪ್ರಧಾನಿ ಮೋದಿ, ನಂತರದ ಸ್ಥಾನ ಯಾರಿಗೆ?