
ಬೋಸ್ಟನ್(ಅ.05): ತನ್ನ ಸೇವೆಯಲ್ಲಿರುವ ಎಲ್ಲ 3 ಶತಕೋಟಿ ಖಾತೆದಾರರ ಖಾಸಗಿ ಮಾಹಿತಿ ಕಳವಾಗಿದ್ದನ್ನು ಯಾಹೂ ಒಪ್ಪಿಕೊಂಡಿದೆ.
ಇತಿಹಾಸದಲ್ಲೇ ಇದೊಂದು ಅತಿದೊಡ್ಡ ದತ್ತಾಂಶ ಕಳವು ಎಂದು ಪರಿಗಣಿಸಲಾಗಿದೆ. 2013 ಆಗಸ್ಟ್'ನಲ್ಲಿ ದತ್ತಾಂಶ ಕಳವಾದ ಎಲ್ಲ ಬಳಕೆದಾರರ ಹೆಚ್ಚುವರಿ ಖಾತೆಗಳಿಗೆ ಎಚ್ಚರಿಕೆಯ ಇ-ಮೇಲ್'ಗಳನ್ನು ರವಾನಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.
ದತ್ತಾಂಶ ಕಳವಾದ ಬಗ್ಗೆ ಯಾಹೂ ಡಿಸೆಂಬರ್'ನಲ್ಲಿ ವಿಷಯ ಬಹಿರಂಗಪಡಿಸಿತ್ತು. ಆದರೆ 1 ಶತಕೋಟಿ ಬಳಕೆದಾರರ ಮಾಹಿತಿ ಮಾತ್ರ ಕಳವಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲ ಖಾತೆಗಳ ದತ್ತಾಂಶ ಕಳವಾದ ಬಗ್ಗೆ ಕಳವಳ ವ್ಯಕ್ತವಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.