ವಿಶ್ವದ ಶ್ರೀಮಂತ ಉದ್ಯಮಿ ರಾಜಕೀಯ ಪಕ್ಷದ ಸದಸ್ಯ

By Web DeskFirst Published Nov 28, 2018, 9:37 AM IST
Highlights

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ರಾಜಕೀಯ ಪಕ್ಷದವೊಂದರ ಸದ್ಯರಾಗಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಬೀಜಿಂಗ್: ಚೀನಾದ ಅತಿದೊಡ್ಡ ಆನ್‌ಲೈನ್ ಮಾರಾಟ ಮಳಿಗೆ ಅಲಿಬಾಬಾ ಸಂಸ್ಥಾಪಕ ಹಾಗೂ ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ಜಾಕ್ ಮಾ, ಚೀನಾದ ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ ಸದಸ್ಯ ಎಂಬ ವಿಷಯ ಬೆಳಕಿಗೆ ಬಂದಿದೆ. 

ಈ ಮಾಹಿತಿಯನ್ನು ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಪೀಪಲ್ಸ್ ಡೇಲಿ’ ಖಚಿತಪಡಿಸಿದ್ದು, ಚೀನಾದ ಅಭಿವೃದ್ಧಿಗೆ ಮಾ ಕೊಡುಗೆ ನೀಡಿದ್ದಾರೆ ಎಂದಿದೆ. 

ಅಲ್ಲದೆ, ‘ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಚೀನಾ ಬೆಲ್ಟ್ ರೋಡ್ ಗ್ಲೋಬಲ್ ವಾಣಿಜ್ಯ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಮಾ ಅವರ ಕೊಡುಗೆ ಅಪಾರವಾದದ್ದು,’ ಎಂದು ಪೀಪಲ್ಸ್ ಡೇಲಿ ಹೇಳಿದೆ.

click me!