
ಆಲ್ಕೋಹಾಲ್, ಸಾರಾಯಿ, ಮದ್ಯ ಏನಾದರೂ ಕರೆದುಕೊಳ್ಳಿ ಅದು ವಾರ್ಷಿಕವಾಗಿ 28 ಲಕ್ಷ ಜನರನ್ನು ವಿವಿಧ ಕಾರಣಕ್ಕೆ ಬಲಿ ಪಡೆದುಕೊಳ್ಳುತ್ತಿದೆ. ಕ್ಯಾನ್ಸರ್, ಹೃದ್ರೋಗ, ಟಿಬಿ ಇನ್ನು ಮುಂತಾದ ಮಾರಕ ಹೆಸರುಗಳಲ್ಲಿ ಮದ್ಯ ಮಾನವರನ್ನು ಬಲಿ ಪಡೆದುಕೊಳ್ಳುತ್ತಿದೆ. ಅಲ್ಪ ಪ್ರಮಾಣದಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬ ಅಂಶವನ್ನು ಸಂಶೋಧನೆ ತಳ್ಳಿ ಹಾಕುತ್ತದೆ.
ಆಗಾಗ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸುವುದೆ ಪರಿಹಾರ ಎಂದು ಗ್ಲೋಬಲ್ ಬರ್ಡನ್ ಆಫ್ ಡೀಸಿಸಸ್ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ವಾಷಿಂಗ್ ಟನ್ ವಿವಿಯ ಸಂಶೋಧನೆ ಆಲ್ಕೋಹಾಲ್ ಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಬಹಿರಂಗ ಮಾಡಿದೆ.
ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!
ಲ್ಯಾಂಸೆಂಟ್ ಮೆಡಿಕಲ್ ಜರ್ನಲ್ ಹೇಳಿರುವುಂತೆ 2016 ರಲ್ಲಿ 28 ಲಕ್ಷ ಜನರ ಸಾವಿಗೆ ಆಲ್ಕೋಹಾಲ್ ಕಾರಣವಾಗಿದೆ. ೧೫ ರಿಂದ ೪೯ ವರ್ಷದೊಳಗಿನವರೆ ಇದರಲ್ಲಿ ಶೇ.20 ರಷ್ಟಿದ್ದಾರೆ. ದಿನಕ್ಕೆ ಏಳು ಪೆಗ್ ಏರಿಸುವ ವಯಸ್ಕರು ಮತ್ತು ಮೂರು ಸಾರಿ ಕುಡಿಯುವ ಮಕ್ಕಳು ಅತಿ ಶೀಘ್ರವಾಗಿ ಕ್ಯಾನ್ಸರ್ ಗೆ ಗುರಿಯಾಗಿತ್ತಾರೆ ಎಂದು ಸಂಶೋಧನೆ ಎಚ್ಚರಿಸಿದೆ. ಒಟ್ಟಿನಲ್ಲಿ ಆಲ್ಕೋಹಾಲ್ ಎಂಬ ಮಾಯಾಂಗನೆಯ ಹಿಂದೆ ಹೋದರೆ ಸಾವಿಗೆ ಹತ್ತಿರವಾದಂತೆ ಎಂಬುದನ್ನು ಸಂಶೋಧನೆ ಮತ್ತೊಮ್ಮೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.