ಅಖಿಲೇಶ್ ತಾವು ಸೋತೆ ಇಲ್ಲ ! ಹೇಗೆ ಗೊತ್ತೆ ?

By Suvarna Web DeskFirst Published Mar 11, 2017, 12:03 PM IST
Highlights

. ಮುಲಾಯಂ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟ 55 ಸ್ಥಾನ ಗಳಿಸಿ ವಿರೋಧ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಲಖನೌ(ಮಾ.11): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗಳಿಸಿ ಭರ್ಜರಿ ಜಯಗಳಿಸಿದೆ. ಮುಲಾಯಂ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟ 55 ಸ್ಥಾನ ಗಳಿಸಿ ವಿರೋಧ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಆದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವೈಯುಕ್ತಿಕವಾಗಿ ತಾವು ಗೆಲ್ಲಲ್ಲೂ ಸೋಲಲೂ ಇಲ್ಲ. ಏಕೆಂದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಇಲ್ಲ. ವಿಧಾನಪರಿಷತ್ ಸದಸ್ಯರಾಗಿರುವ ಅವರ ಅವಧಿ 2018ರವರೆಗೂ ಇದೆ.

ಸ್ವತಃ ಎಸ್'ಪಿ ಪಕ್ಷವೇ ಅಖಿಲೇಶ್ ಸ್ಪರ್ಧಿಸುವುದಿಲ್ಲವೆಂದು ಮುಂಚೆಯೇ ತಿಳಿಸಿತ್ತು. ಯಾದವಿ ಕಲಹ ಹಾಗೂ ಮೋದಿ ಅಲೆಯ ನಡುವೆ  ಎಸ್'ಪಿಗೆ ಸೋಲುಂಟಾಗಿದೆ.

click me!