
ನವದೆಹಲಿ (ಮಾ.03): ರಾಂಜಾಸ್ ಕಾಲೇಜು ಹಿಂಸಾಚಾರ ಹಾಗೂ ಗುರ್’ಮೆಹರ್ ಸಿಂಗ್ ವಿವಾದಗಳ ಹಿನ್ನೆಲೆಯಲ್ಲಿ, ರವೀಂದ್ರನಾಥ್ ಠಾಗೋರ್ ಅವರ ಬರಹಗಳನ್ನು ಓದುವಂತೆ ಸಮಾಜವಾದಿ ಪಕ್ಷ ಮುಖಂಡ ಅಖಿಲೇಶ್ ಯಾದವ್ ಬಿಜೆಪಿಗೆ ಸಲಹೆ ನೀಡಿದ್ದಾರೆ.
ರಾಷ್ಟ್ರೀಯವಾದವನ್ನು ಅರಿಯಲು ಬಿಜೆಪಿ ನಾಯಕರು ರವೀಂದ್ರನಾಥ ಟಾಗೋರ್ ಅವರ ಪುಸ್ತಕಗಳನ್ನು ಓದಬೇಕು. ಎಷ್ಟು ಮಂದಿ ಹುತಾತ್ಮರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ? ಎಷ್ಟು ಮಂದಿ ಹುತಾತ್ಮ ಕುಟುಂಬಗಳಿಗೆ ಬಿಜೆಪಿ ನೆರವು ನೀಡಿದೆ? ಬಿಜೆಪಿಗೆ ಬೇಕಾಗಿರುವುದು ಕೇವಲ ಮತಗಳು ಮಾತ್ರ, ಅದಕ್ಕಾಗಿ ರಾಷ್ಟ್ರೀಯವಾದದ ಸೋಗಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಎಂದು ಅಖಿಲೇಶ್ ಏಎನ್’ಐ’ಗೆ ನೀಡಿರುವ ಸಂದರ್ಶನದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್’ನೊಂದಿಗೆ ಮಾಡಿಕೊಂಡಿರುವ ಮೈತ್ರಿಯನ್ನು ಲಕ್ನೋ-ದೆಹಲಿ ಮೈತ್ರಿಯನ್ನಾಗಿ ನೋಡಬೇಕಾಗಿಲ್ಲ, ಬದಲಾಗಿ ಉತ್ತರ ಪ್ರದೇಶದ ತ್ತಮ ಭವಿಷ್ಯಕ್ಕಾಗಿ ಇಬ್ಬರು ಯುವನಾಯಕರು ಮಾಡಿಕೊಂಡಿರುವ ಮೈತ್ರಿ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಬಾರಿಯಂತೆ ಈ ಚುನಾವಣೆಯಲ್ಲೂ ಸಮಾಜವಾದಿ ಪಕ್ಷ ಜಯಭೇರಿ ಬಾರಿಸುವುದು ಖಚಿತವೆಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.