ಏರ್ ಸೆಲ್- ಮ್ಯಾಕ್ಸಿಸ್ ಪ್ರಕರಣ: ಚಿದಂಬರಂಗೆ ನಿರೀಕ್ಷಣಾ ಜಾಮೀನು

First Published Jun 5, 2018, 12:51 PM IST
Highlights

ಏರ್’ಸೆಲ್ ಮ್ಯಾಕ್ಸಿಸ್ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಜುಲೈ 10 ರವರೆಗೆ ಮಧ್ಯಂತರ ಜಾಮೀನು ನೀಡಿದೆ. 

ಬೆಂಗಳೂರು (ಜೂ. 05): ಏರ್’ಸೆಲ್ ಮ್ಯಾಕ್ಸಿಸ್ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಜುಲೈ 10 ರವರೆಗೆ ಮಧ್ಯಂತರ ಜಾಮೀನು ನೀಡಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ನಿನ್ನೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಿದ್ದರು. ಇಂದು ದೆಹಲಿ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. 

ಹಿಂದಿನ ವಿಚಾರಣೆ ವೇಳೆ ಚಿದಂಬರಂ ಮೇಲೆ ಜು. 5 ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಕೋರ್ಟ್ ಸೂಚಿಸಿತ್ತು. ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಾಗ ಸಹಕರಿಸಬೇಕೆಂದು ಚಿದಂಬರಂಗೆ ಸೂಚಿಸಿತ್ತು. ಅದರಂತೆ ನಿನ್ನೆ ಇಡಿ ವಿಚಾರಣೆಗೆ ಚಿದಂಬರಂ ಹಾಜರಾಗಿದ್ದರು. 

ಏನಿದು ಪ್ರಕರಣ? 

ಏರ್ ಸೆಲ್ ಸಂಸ್ಥೆ 2006ರಲ್ಲಿ 3,500 ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆ(ಎಫ್​ಡಿಐ)ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರುಪಾಯಿ ಎಫ್​ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ ಸಿಸಿಇಎಗೆ ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು. ಇದೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದರು. 
 

click me!