Switch To Electric Vehicles : ಓಲಾ, ಉಬರ್, ಜೊಮೊಟೊಗೆ ದೆಹಲಿ ಸರ್ಕಾರ ನೀಡಲಿದೆ ಖಡಕ್ ಸೂಚನೆ!

By Suvarna News  |  First Published Dec 26, 2021, 11:47 PM IST

ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರದ ಕಠಿಣ ಕ್ರಮ
ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಿ ಎಂದು ಇ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಲು ತಯಾರ
ಪೊಲ್ಯೂಷನ್ ಅಂಡರ್ ಚೆಕ್ ಸರ್ಟಿಫಿಕೇಟ್ ಇಲ್ಲದೇ ಪೆಟ್ರೋಲ್ ಕೂಡ ಸಿಗಲ್ಲ


ನವದೆಹಲಿ (ಡಿ.26): ವಾಯುಮಾಲಿನ್ಯದಿಂದ (Air Pollution) ಅಪಾಯಕ್ಕೆ ಒಳಗಾಗುವ ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿರುವ ನವದೆಹಲಿ (New Delhi), ಮುಂಬರುವ ವರ್ಷಗಳಲ್ಲಿ ಇದರ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈಗಾಗಲೇ ತನ್ನ ತಯಾರಿಯನ್ನು ಆರಂಭಿಸಿದೆ. 2020ರಲ್ಲಿ ಜಾರಿಯಾದ ದೆಹಲಿ ಎಲೆಕ್ಟ್ರಿಕ್ ವಾಹನಗಳ ನಿಯಮದ ಅಡಿಯಲ್ಲಿ, (Delhi Electric Vehicles policy ) 2024ರ ವೇಳೆಗೆ ದೆಹಲಿಯಲ್ಲಿರುವ ಇರುವ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಶೇಕಡಾ 25 ರಷ್ಟು ಎಲೆಕ್ಟ್ರಿಕ್ ವಾಹನಗಳಾಗಿರಬೇಕು ಎನ್ನುವ ಗುರಿ ಹೊಂದಿರುವ ದೆಹಲಿ ಸರ್ಕಾರ (Delhi government), ಎಲ್ಲಾ ಇ-ಕಾಮರ್ಸ್ ಕಂಪನಿಗಳು, ಆಹಾರ ವಿತರಣಾ ಸೇವಾ ಕಂಪನಿಗಳು, ಕ್ಯಾಬ್ ಸೇವೆಗಳ ಕಂಪನಿಗಳಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವಂತೆ ಸೂಚನೆ ನೀಡಿದೆ. ಅದರೊಂದಿಗೆ ನಗರದಲ್ಲಿರುವ ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿಯೂ ಪೊಲ್ಯೂಶನ್ ಅಂಡರ್ ಚೆಕ್ (ಪಿಯುಸಿ) ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದ್ದು, ಈ ಪತ್ರಗಳು ಇಲ್ಲದೇ ಇದ್ದಲ್ಲಿ ವಾಹನಗಳಿಗೆ ಇಂಧನವನ್ನು ಹಾಕದೇ ಇರುವಂತೆ ಡೀಲರ್ ಬಳಿ ಕೇಳುವುದಾಗಿ ತಿಳಿಸಿದೆ.

ಪ್ರಸ್ತುತ ದೆಹಲಿಯಲ್ಲಿರುವ ವಾಯುಮಾಲಿನ್ಯದ ಪ್ರಮಾಣದಲ್ಲಿ, ವಾಹನಗಳಿಂದ ಆಗುವ ಮಾಲಿನ್ಯವೇ ಶೇಕಡಾ 40ರಷ್ಟಿದೆ. "ವಾಹನಗಳ ಪೊಲ್ಯೂಶನ್ ಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಎರಡು ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಜೊಮೊಟೊ (Zomato), ಸ್ವಿಗ್ಗಿ (Swiggy), ಓಲಾ (Ola), ಉಬರ್ (Uber) ಸೇರಿದಂತೆ ಇದೇ ಮಾದರಿಯ ಕೆಲ ಕಂಪನಿಗಳಿಗೆ ತಮ್ಮ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ಗೆ ಬದಲಾಯಿಸುವಂತೆ ಸರ್ಕಾರ ಕೇಳಲಿದೆ. ದೆಹಲಿಯಲ್ಲಿರುವ ಎಲ್ಲಾ ವಾಹನಗಳ ಪೈಕಿ, ಈ ಸರ್ವೀಸ್ ಗಳ ವಾಹನಗಳೇ ಶೇ.30ರಷ್ಟಿವೆ' ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರೊಂದಿಗೆ ಪಿಯುಸಿ(pollution-under-check) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ಹಾಕದೇ ಇರುವಂತೆ ಪೆಟ್ರೋಲ್ ಬಂಕ್ ಡೀಲರ್ ಬಳಿ ಕೇಳಲಿದ್ದೇವೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪರಿಸರ (ರಕ್ಷಣೆ) ಕಾಯ್ದೆಯಡಿ (nvironment (Protection) Act) ನಿರ್ದೇಶನಗಳನ್ನು ಈ ವಾರ ಹೊರಡಿಸುವ ನಿರೀಕ್ಷೆಯಿದೆ.
ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಅಥವಾ ಇವಿಗಳಿಗೆ ಬದಲಾಯಿಸಲು ಅಗ್ರಿಗೇಟರ್‌ಗಳಿಗೆ ಗಡುವು ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, "ಇದನ್ನು ಹಂತಹಂತವಾಗಿ ಮಾಡಲಾಗುತ್ತದೆ. ನಾವು ಕರಡು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ" ಎಂದರು.

ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವುದರೊಂದಿಗೆ ಸಾರಿಗೆ ಇಲಾಖೆಯು ಖಾಸಗಿ ಜಾಗದಲ್ಲಿ ಬ್ಯಾಟರಿ ವಿನಿಮಯ ಮೂಲಸೌಕರ್ಯವನ್ನು ಹೊಂದುವ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ರಾಜಧಾನಿಯ ಸಿಎನ್‌ಜಿ ಪಂಪ್‌ಗಳಲ್ಲಿ 50 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬ್ಯಾಟರಿ ಚಾರ್ಜ್ ಮಾಡುವ ಇವಿಗಳಿಗಿಂತ ಬ್ಯಾಟರಿಗಳನ್ನು ಬದಲಾವಣೆ ಮಾಡುವ ವ್ಯವಸ್ಥೆ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಅತ್ಯಂತ ಕಷ್ಟಕರವಾದ ವರ್ಗವೆಂದರೆ ದ್ವಿಚಕ್ರವಾಹನಳು. ಈ ವಾಹನಗಳನ್ನು ಎಲೆಕ್ಟ್ರಿಕ್ ಗೆ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಮಾತುಕತೆಗಳನ್ನು ಆರಂಭಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Delhi Pollution: ಮಾಲಿನ್ಯ ನಿಯಂತ್ರಣಕ್ಕೆ ಟಾಸ್ಕ್‌ ಫೋರ್ಸ್‌ : ಸುಪ್ರೀಂಕೋರ್ಟ್‌ಗೆ ಮಾಹಿತಿ!
ಫ್ಲಿಪ್‌ಕಾರ್ಟ್ (2030 ರ ವೇಳೆಗೆ) ಮತ್ತು ಫೆಡ್‌ಎಕ್ಸ್ (2040 ರ ಹೊತ್ತಿಗೆ) ಮಾತ್ರ ತಮ್ಮ ಕೊನೆಯ ಡೆಲಿವರಿ ವ್ಯಕ್ತಿ ಕೂಡ ಎಲೆಕ್ಟ್ರಿಕ್ ವಾಹನಗಳನ್ನೇ ಹೊಂದಿರಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಗುರಿಗಳನ್ನು ಇಟ್ಟುಕೊಂಡಿದೆ.  ಆದರೆ DHL ತನ್ನ ಫ್ಲೀಟ್‌ಗೆ 60 ಪ್ರತಿಶತ ವಿದ್ಯುದೀಕರಣ ಗುರಿಯನ್ನು ನಿಗದಿಪಡಿಸಿದೆ.

Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!
ಮೋಟಾರು ವಾಹನ ಕಾಯಿದೆ, 1993 ರ ಸೆಕ್ಷನ್ 190(2) ರ ಅಡಿಯಲ್ಲಿ, ಮಾನ್ಯವಾದ ಪಿಯುಸಿ ಹೊಂದಿರದ ವಾಹನ ಮಾಲೀಕರಿಗೆ ರೂ 10,000 ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಕಾರ್ಬನ್ ಮಾನಾಕ್ಸೈಡ್, ನೈಟ್ರಸ್ ಆಕ್ಸೈಡ್, ಕಾರ್ಬನ್ ಡೈಆಕ್ಸೈಡ್‌ನಂತಹ ಮಾಲಿನ್ಯಕಾರಕಗಳನ್ನು ಹೊರಸೂಸುವ ನಿಟ್ಟಿನಲ್ಲಿ ಮಾನದಂಡಗಳನ್ನು ಪೂರೈಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಲೀಕರು ತಮ್ಮ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಿ ಪಿಯುಸಿ ಪ್ರಮಾಣ ಪತ್ರ ತೆಗೆದುಕೊಳ್ಳಬೇಕಿರುತ್ತದೆ. ನಗರದಲ್ಲಿ ಪೆಟ್ರೋಲ್ ಪಂಪ್‌ಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ ಸುಮಾರು 1,000 ಅಧಿಕೃತ ಮಾಲಿನ್ಯ ತಪಾಸಣೆ ಕೇಂದ್ರಗಳನ್ನು ಈ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ. 

click me!