
ಜೈಪುರ್(ಮೇ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.
ಕರಾಚಿಯಿಂದ ಸರಂಜಾಮು ಹೊತ್ತು ತೆರಳುತ್ತಿದ್ದ ಜಾರ್ಜಿಯಾ ನಿರ್ಮಿತ Antonov An-12 ಎಂಬ ಸರಕು ಸಾಗಾಣಿಕೆ ವಿಮಾನ ಅಕ್ರಮವಾಗಿ ಭಾರತೀಯ ವಾಯುಗಡಿಯೊಳಗೆ ಪ್ರವೇಶಿಸಿದೆ.
ಕೂಡಲೇ ಕಾರ್ಯಾಚರಣೆಗಿಳಿದ ವಾಯುಸೇನೆ ತನ್ನ ಯುದ್ಧ ವಿಮಾನದ ಸಹಾಯದಿಂದ, ಸರಕು ಸಾಗಾಣಿಕೆ ವಿಮಾನವನ್ನು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಿದೆ.
ಸದ್ಯ ವಿಮಾನದ ಪೈಲೆಟ್ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ವಾಯುಸೇನೆ, ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೈಲೆಟ್’ನ ಅಚಾತುರ್ಯದಿಂದಾಗಿ ವಿಮಾನ ಭಾರತದ ಗುಜರಾತ್ ವಾಯುಗಡಿ ಪ್ರವೇಶಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.