ಬೆಂಗಳೂರು ಏರ್’ಪೋರ್ಟ್’ನಲ್ಲಿ ಏರ್ ಏಷ್ಯಾ ಸಿಬ್ಬಂದಿ ಅಸಭ್ಯ ವರ್ತನೆ

Published : Nov 10, 2017, 06:34 PM ISTUpdated : Apr 11, 2018, 01:02 PM IST
ಬೆಂಗಳೂರು ಏರ್’ಪೋರ್ಟ್’ನಲ್ಲಿ ಏರ್ ಏಷ್ಯಾ ಸಿಬ್ಬಂದಿ ಅಸಭ್ಯ ವರ್ತನೆ

ಸಾರಾಂಶ

ಯುವತಿ ಜತೆ ಏರ್’ಏಷ್ಯಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ನ.10): ಯುವತಿ ಜತೆ ಏರ್’ಏಷ್ಯಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏರ್ ಏಷ್ಯಾ ವಿಮಾನ ಸಂ.1585 ನಲ್ಲಿ ರಾಂಚಿಯಿಂದ ಬೆಂಗಳೂರಿಗೆ ಬರುತ್ತಿದ್ದ ಯುವತಿಗೆ ಕಿರುಕುಳ ನೀಡಲಾಗಿದೆ. ಪ್ರಯಾಣದ ವೇಳೆ ಶೌಚಾಲಯ ಸ್ವಚ್ಛವಾಗಿಲ್ಲ ಎಂದು ಯುವತಿ ಹೇಳಿದ್ದರು. ಶೌಚಾಲಯ ಕ್ಲೀನ್ ಮಾಡುವಂತೆ ಸಿಬ್ಬಂದಿಗೆ ತಿಳಿಸಿದ್ದಳು.  ಈ ವೇಳೆ ಸನ್ಮಿತ್ ಕರಾಂಡಿಕಾರ್‌ ನಾವು ಕ್ಲೀನ್ ಮಾಡ್ತೀವಿ ಹೋಗಿ ಕುಳಿತುಕೊಳ್ಳಿ ಎಂದಿದ್ದ.  ಏಕೆ ನನಗೆ ಬೆದರಿಕೆ ಹಾಕ್ತೀರಿ ಎಂದು ಯುವತಿ ಪ್ರಶ್ನಿಸಿದಾಗ, ಇದು ನನ್ನ ಫ್ಲೈಟ್ ಹೇಗಾದ್ರೂ ವರ್ತಿಸ್ತೀನಿ ಇಲ್ಲಿ ನಾನು ಹೇಳಿದಂತೆ ಕೇಳಬೇಕು ಎಂದು ರಾಂಚಿಯಿಂದ ಹೈದರಾಬಾದ್‌ಗೆ ಬಂದಾಗ ಅಸಭ್ಯವಾಗಿ ವರ್ತಿಸಿದ್ದಾರೆ.   ಬಲವಂತವಾಗಿ ಯುವತಿಯ ಫೋಟೋವನ್ನು ತೆಗೆದಿದ್ದಾರೆ.  ಬಳಿಕ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ಬಳಿಕ ಪ್ರಯಾಣಿಕರೆಲ್ಲಾ ಇಳಿದು ಹೋದ ಬಳಿಕ ಯುವತಿಯನ್ನು ಅಡ್ಡಗಟ್ಟಿ ಪಕ್ಕಕ್ಕೆ ಎಳೆದೊಯ್ದು ಕ್ಷಮೆ ಕೇಳುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಕಿರಿಕುಳ ನೀಡಿದ ಸನ್ಮಿತ್ ಕರಾಂಡಿಕಾರ್, ಕೈಜದ್ ಸುಂಟೋಕ್, ಹಾಗೂ ಜತಿನ್ ರವೀಂದ್ರನ್ ಮೂವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 3ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!