ರ‍್ಯಾಲಿ ನಡೆಸದಂತೆ ಒವೈಸಿಗೆ ಕಾಂಗ್ರೆಸ್ ನಿಂದ 25 ಲಕ್ಷ ರೂ. ಆಫರ್!

Published : Nov 20, 2018, 05:32 PM IST
ರ‍್ಯಾಲಿ ನಡೆಸದಂತೆ ಒವೈಸಿಗೆ ಕಾಂಗ್ರೆಸ್ ನಿಂದ 25 ಲಕ್ಷ ರೂ. ಆಫರ್!

ಸಾರಾಂಶ

ಕಾಂಗ್ರೆಸ್ ವಿರುದ್ಧ ಅಸದುದ್ದೀನ್ ಒವೈಸಿ ಹೊಸ ಬಾಂಬ್! ರ‍್ಯಾಲಿ ನಡೆಸದಂತೆ ಒವೈಸಿಗೆ ಕಾಂಗ್ರೆಸ್ ನಿಂದ ಹಣದ ಆಮೀಷ! ಒವೈಸಿಗೆ 25 ಲಕ್ಷ ರೂ. ಆಫರ್ ನೀಡಿದ ಕಾಂಗ್ರೆಸ್ ಅಭ್ಯರ್ಥಿ! ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿತ್ತ ಒವೈಸಿ ಆರೋಪ 

ಹೈದರಾಬಾದ್(ನ.20): ತೆಲಂಗಾಣದ ನಿರ್ಮಲ್‌ನಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರ ರ‍್ಯಾಲಿಯನ್ನು ರದ್ದುಗೊಳಿಸಲು ಕಾಂಗ್ರೆಸ್ 25 ಲಕ್ಷ ರೂ. ಆಫರ್ ಮಾಡಿತ್ತು ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ. 

ಆರೋಪಕ್ಕೆ ಸಾಕ್ಷಿಯಾಗಿ ಆಡಿಯೋ ಟೇಪ್ ತಮ್ಮ ಬಳಿ ಇದ್ದು, ಅಗತ್ಯ ಬಿದ್ದಲ್ಲಿ ಬಹಿರಂಗಪಡಿಸುವುದಾಗಿ ಒವೈಸಿ ಹೇಳಿದ್ದಾರೆ. ಆದರೆ 25 ಲಕ್ಷ ರೂ. ಆಫರ್ ಮಾಡಿರುವ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲು ಒವೈಸಿ ನಿರಾಕರಿಸಿದ್ದಾರೆ.

ಆದರೆ ತಮ್ಮ ಭಾಷಣದಲ್ಲಿ ಒವೈಸಿ ಈ ಕುರಿತು ಪ್ರಸ್ತಾಪ ಮಾಡುತ್ತಲೇ, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಎ. ಮಹೇಶ್ವರ ರೆಡ್ಡಿ ಹೆಸರು ಕೂಗಿದ್ದಾರೆ.  

ರ‍್ಯಾಲಿ ರದ್ದುಪಡಿಸುವಂತೆ ಹಣದ ಆಫರ್ ಮಾಡಿರುವ ಕಾಂಗ್ರೆಸ್‌ ನಡೆ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಎಐಎಂಐಎಂ ಪಕ್ಷದ ವತಿಯಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದಿದ್ದರೆ ಟಿಆರ್‌ಎಸ್‌ಗೆ ಬೆಂಬಲ ನೀಡುವ ನಿರ್ಧಾರ ಕುರಿತಂತೆ ಸಭೆ ನಡೆಸಿತ್ತು ಎನ್ನಲಾಗಿದೆ. 

ಹೀಗಾಗಿ ಸಭೆ ನಡೆಸದಂತೆ ಮತ್ತು ಟಿಆರ್‌ಎಸ್‌ಗೆ ಬೆಂಬಲ ಸೂಚಿಸದಂತೆ ಕಾಂಗ್ರೆಸ್ ಒವೈಸಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಡಿಂಗ್, ನಿರಂತರ ಮೀಟಿಂಗ್ ನಡೆಸಿ ಬೇಸತ್ತು 30 ಲಕ್ಷ ರೂ ವೇತನದ ಉದ್ಯೋಗ ತೊರೆದ ಚೆನ್ನೈ ಟೆಕ್ಕಿ!
ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ