ಅರಿಶಿನ ಕೃಷಿಗೆ ಕೀಟ ಬಾಧೆಯೇ? ಹೀಗೆ ಮಾಡಿದ್ರೆ ಅರಿಶಿನ ಚೆನ್ನಾಗಿ ಬೆಳೆಯುತ್ತೆ!

By Suvarna Web Desk  |  First Published Feb 27, 2018, 11:19 AM IST

ಅರಿಶಿನ ಕೃಷಿಯನ್ನು ಸಾವಯವ ರೀತಿಯಿಂದ ಮಾಡಿ ಗೆದ್ದ ರೈತರು ಬಹಳ ಮಂದಿ ಇದ್ದಾರೆ. ಇತರ ಉತ್ಪನ್ನಗಳಂತೆ ಅರಿಶಿನ ಕೃಷಿಯಲ್ಲೂ  ಸಾಕಷ್ಟು ಏರಿಳಿತಗಳುಂಟು. ಆದರೆ ಯಥೇಚ್ಛ ಕೊಟ್ಟಿಗೆ ಗೊಬ್ಬರ, ಜೀವಾಮೃತ, ಜೈವಿಕ ಕೀಟ-ರೋಗ ನಿಯಂತ್ರಕಗಳಿಂದ ಅರಿಶಿನ ಕೃಷಿ ಗೆಲ್ಲುತ್ತದೆ.


ಬೆಂಗಳೂರು (ಫೆ. 27): ಅರಿಶಿನ ಕೃಷಿಯನ್ನು ಸಾವಯವ ರೀತಿಯಿಂದ ಮಾಡಿ ಗೆದ್ದ ರೈತರು ಬಹಳ ಮಂದಿ ಇದ್ದಾರೆ. ಇತರ ಉತ್ಪನ್ನಗಳಂತೆ ಅರಿಶಿನ ಕೃಷಿಯಲ್ಲೂ  ಸಾಕಷ್ಟು ಏರಿಳಿತಗಳುಂಟು. ಆದರೆ ಯಥೇಚ್ಛ ಕೊಟ್ಟಿಗೆ ಗೊಬ್ಬರ, ಜೀವಾಮೃತ, ಜೈವಿಕ ಕೀಟ-ರೋಗ ನಿಯಂತ್ರಕಗಳಿಂದ ಅರಿಶಿನ ಕೃಷಿ ಗೆಲ್ಲುತ್ತದೆ.

ಮೀನಿನ ಟಾನಿಕ್‌ಅನ್ನು ಅರಿಶಿನ ಕೃಷಿಗೆ ಬಳಸಿ ಗೆದ್ದ ರೈತರಿದ್ದಾರೆ.  ಮೀನಿನ ಟಾನಿಕ್ ಮಾಡುವ ವಿಧಾನ ಹೀಗಿದೆ; ಒಂದು ಕಿಲೋ ಮೀನನ್ನು ಸಣ್ಣಗೆ ಕತ್ತರಿಸಿ, 1 ಕಿಲೋ ಬೆಲ್ಲದೊಂದಿಗೆ ಹಾಕಿಡುತ್ತಾರೆ. ಇದನ್ನು 10 ಲೀಟರ್ ನೀರಿನಲ್ಲಿ ನೆನೆಸಿ 15  ದಿನ ಇಡಲಾಗುತ್ತೆ. ಹೀಗೆ ತಯಾರಾದ ಮೀನಿನ  ಟಾನಿಕ್‌ ಅನ್ನು 10 ಲೀಟರ್ ನೀರಿಗೆ ಹಾಕಿ ಒಂದೂವರೆ ತಿಂಗಳಿಗೊಮ್ಮೆಯಂತೆ  ಸಿಂಪಡಿಸಿದರಾಯ್ತು. ಅದು ಟಾನಿಕ್‌ನಂತೆ ಕೆಲಸ ಮಾಡುತ್ತೆ.
ಇಳುವರಿ ಹೆಚ್ಚಿಸುತ್ತದೆ. 

Latest Videos

click me!