ಕೃಷಿ ಉತ್ಪನ್ನಗಳಿಗೂ ಗರಿಷ್ಠ ಚಿಲ್ಲರೆ ಮಾರಾಟ ದರ

By Suvarna Web DeskFirst Published Jan 13, 2018, 10:05 AM IST
Highlights

ಕೃಷಿ ಉತ್ಪನ್ನಗಳಿಗೂ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿ ಮಾಡಬೇಕೆಂದು ಆರೆಸ್ಸೆಸ್  ನಂಟಿನ ಭಾರತೀಯ ಕಿಸಾನ್ ಸಂಘ ಕೇಂದ್ರವನ್ನು ಒತ್ತಾಯಿಸಿದೆ.

ನವದೆಹಲಿ: ಕೃಷಿ ಉತ್ಪನ್ನಗಳಿಗೂ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿ ಮಾಡಬೇಕೆಂದು ಆರೆಸ್ಸೆಸ್  ನಂಟಿನ ಭಾರತೀಯ ಕಿಸಾನ್ ಸಂಘ ಕೇಂದ್ರವನ್ನು ಒತ್ತಾಯಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ಅಧ್ಯಕ್ಷ ಮೋಹಿನಿ ಮೋಹನ ಮಿಶ್ರಾ, ರೈತ 1 ಕೆಜಿ ಟೊಮೆಟೊ ಅನ್ನು 5 ರು.ಗೆ ಮಾರಾಟ ಮಾಡುತ್ತಾನೆ. ಅದನ್ನು ಖರೀದಿಸಿದ ಮಂಡಿಯಾತ 30 ರು.ಗೆ ಮಾರುತ್ತಾನೆ.

ಅಂಗಡಿಯವ ಅದನ್ನು 50 ರು.ಗೆ ಗ್ರಾಹಕಗೆ ಮಾರುತ್ತಾನೆ. ಎಲ್ಲಾ ವಸ್ತುಗಳನ್ನು ಎಂಆರ್ ಪಿಗೆ ಖರೀದಿಸುವ ರೈತನಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಕೃಷಿ ಉತ್ಪನ್ನಕ್ಕೂ ಎಂಆರ್‌ಪಿ ನಿಗದಿ ಮಾಡಬೇಕು ಎಂದು ಮಿಶ್ರಾ ಒತ್ತಾಯಿಸಿದ್ದಾರೆ.

click me!