ಶಬರಿಮಲೆಯಲ್ಲಿ ಮಹಿಳೆಯರ ವಯಸ್ಸಿನ ದಾಖಲೆ ಕಡ್ಡಾಯ..!

By Suvarna Web DeskFirst Published Jan 5, 2018, 9:21 AM IST
Highlights

ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಭೇಟಿಗೆ ಬರುವ ಮಹಿಳಾ ಭಕ್ತರು ತಮ್ಮ ವಯಸ್ಸು ದೃಢೀಕರಿಸುವ ದಾಖಲೆ ತೋರಿಸುವುದು ಕಡ್ಡಾಯಗೊಳಿಸಲಾಗಿದೆ.

ತಿರುವನಂತಪುರಂ(ಜ.05) : ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಭೇಟಿಗೆ ಬರುವ ಮಹಿಳಾ ಭಕ್ತರು ತಮ್ಮ ವಯಸ್ಸು ದೃಢೀಕರಿಸುವ ದಾಖಲೆ ತೋರಿಸುವುದು ಕಡ್ಡಾಯಗೊಳಿಸಲಾಗಿದೆ.

10-50ರ ನಡುವಿನ ಹರೆಯದ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿರುವ ಈ ದೇವಳದಲ್ಲಿ ನಿಯಮವನ್ನು ಉಲ್ಲಂಘಿಸಿ ಮಹಿಳೆಯರು ಬೆಟ್ಟ ಹತ್ತುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ತಿರುವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧಾರ ಕೈಗೊಂಡಿದೆ.

ಮೂರು ತಿಂಗಳ ವಾರ್ಷಿಕ ಯಾತ್ರಾ ಕಾರ್ಯಕ್ರಮ ಜ.14ರಂದು ಮಕರ ಬೆಳಕು ಉತ್ಸವದ ಬಳಿಕ ಕೊನೆಗೊಳ್ಳಲಿದೆ. ಅಯ್ಯಪ್ಪ ಸ್ವಾಮಿಯು ‘ಬ್ರಹ್ಮಚಾರಿ’ ಆಗಿರುವುದರಿಂದ ಮುಟ್ಟು ಆಗುವ ಸಾಧ್ಯತೆಯಿರುವ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ. 

ಶಬರಿಮಲೆ ತಪ್ಪಲಿನಲ್ಲಿ ಸಾಮಾನ್ಯ ತಪಾಸಣೆಯ ವೇಳೆ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಅಧಿಕೃತ ದೃಢೀಕರಣ ಪತ್ರ ಸ್ವೀಕರಿಸಲಾಗುವುದು ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ಹೇಳಿದ್ದಾರೆ.

click me!