
ರೋಣ: ಪ್ಲಾಸ್ಟಿಕ್ ಅಕ್ಕಿ ಆಯ್ತು, ಮೊಟ್ಟೆಯಾಯ್ತು ಈಗ ಪ್ಲಾಸ್ಟಿಕ್ ಸಕ್ಕರೆಯ ಸುದ್ದಿ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಕಿರಾಣಿ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ರೋಣ ತಾಲೂಕಿನ ಇಟಗಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಅದನ್ನು ಸಂಗ್ರಹಿಸಿದ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿಕೊಟ್ಟರಲ್ಲದೆ, ಮುಂದಿನ ಸೂಚನೆ ನೀಡುವವರೆಗೆ ಮಾರಾಟ ಸಕ್ಕರೆ ಮಾರದಂತೆ ಅಂಗಡಿ ಮಾಲೀಕರಿಗೆ ಸೂಚಿಸಿದ್ದಾರೆ.
ಈ ಅಂಗಡಿಯಿಂದ ಒಯ್ದ ಸಕ್ಕರೆಯನ್ನು ಹಾಕಿ ಟೀಗೆ ಮಾಡುವ ವೇಳೆ ಪ್ಲಾಸ್ಟಿಕ್ ರೀತಿಯ ಕಪ್ಪು ಬಣ್ಣದ ವಸ್ತು ಪಾತ್ರೆಗೆ ಅಂಟಿಕೊಳ್ಳುತ್ತಿದ್ದು, ಮನೆ ತುಂಬಾ ದುರ್ವಾಸನೆ ಆವರಿಸಿ ಚಹಾ ಕುಡಿಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಆ ಅಂಗಡಿಯಲ್ಲಿ ಸಕ್ಕರೆ ತಂದು ಚಹಾ ಮಾಡಿ ನೋಡಿದಾಗ ಪಾತ್ರೆಯ ತಳದಲ್ಲಿ ಅಂಗೈಯಷ್ಟುಗಾತ್ರದ ಸುಟ್ಟಪ್ಲಾಸ್ಟಿಕ್ ವಸ್ತು ಸಂಗ್ರಹವಾಗಿತ್ತು. ಹೀಗಾಗಿ, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರಲ್ಲದೆ, ಇನ್ನುಳಿದ ಸಕ್ಕರೆ ಮಾರದಂತೆ ಸೂಚಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.