
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದೇ ಮೇ 26ಕ್ಕೆ 3 ವರ್ಷ ತುಂಬುತ್ತಿದೆ. 30 ವರ್ಷಗಳ ನಂತರ, ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿದೆಯೇ? ಸರ್ಕಾರದ ಜನಪ್ರಿಯತೆ ಹೇಗಿದೆ ಎಂಬ ಬಗ್ಗೆ ಇಂಡಿಯಾ ಟುಡೇ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಈಗಲೂ ಜನಪ್ರಿಯ ನಾಯಕ. ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆಯ ಪ್ರಮಾಣವೇ ಹೆಚ್ಚು. ದೇಶದ 2 ಲಕ್ಷಕ್ಕೂ ಹೆಚ್ಚು ಜನರ ಸಮೀಕ್ಷೆ ನಡೆಸಿರುವ ಇಂಡಿಯಾ ಟುಡೇ, ದೇಶದ 200 ಪ್ರದೇಶಗಳಲ್ಲಿ ಜನತೆಯ ಅಭಿಪ್ರಾಯ ಸಂಗ್ರಹಿಸಿದೆ. ಸರ್ಕಾರಕ್ಕೆ 2 ವರ್ಷ ತುಂಬಿದಾಗ ನಡೆಸಿದ್ದ ಸಮೀಕ್ಷೆಗೂ, ಈಗಿನ ಸಮೀಕ್ಷೆಗೂ ಹೋಲಿಸಿದರೆ, ಕೇಂದ್ರ ಸರ್ಕಾರದ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.
=============
ಕೇಂದ್ರ ಸರ್ಕಾರದ ಸಾಧನೆ ತೃಪ್ತಿಕರವಾಗಿದೆಯೇ?
ಉತ್ತಮ - ಶೇ. 44
ಪರವಾಗಿಲ್ಲ - ಶೇ. 39
ಕೆಟ್ಟದಾಗಿದೆ - ಶೇ. 17
ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದೆಯೇ?
ಹೌದು - ಶೇ.59
ಇಲ್ಲ - ಶೇ.32
ಗೊತ್ತಿಲ್ಲ - ಶೇ.9
ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಕ್ರಮಗಳು ತೃಪ್ತಿಕರವಾಗಿವೆಯೇ?
ಹೌದು - ಶೇ.28
ಇಲ್ಲ - ಶೇ.66
ಗೊತ್ತಿಲ್ಲ - ಶೇ. 6
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆಯೇ?
ಹೌದು - ಶೆ.60
ಇಲ್ಲ - ಶೇ.28
ಕೇಂದ್ರ ಸರ್ಕಾರದ ಯಾವ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ?
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ - ಶೇ. 47
ಮೇಕ್ ಇನ್ ಇಂಡಿಯಾ - ಶೇ.8
ಸ್ವಚ್ಛ ಭಾರತ್ ಯೋಜನೆ - ಶೇ.16
ಜನ್ ಧನ್ ಯೋಜನೆ - ಶೇ.29
3 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವ ಭರವಸೆ ಮೂಡಿದೆಯೇ?
ಹೌದು - ಶೇ.21
ಇಲ್ಲ - ಶೇ.63
ಗೊತ್ತಿಲ್ಲ - ಶೇ.16
ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆಯೇ?
ಹೌದು - ಶೇ.81
ಇಲ್ಲ - ಶೇ.13
ಗೊತ್ತಿಲ್ಲ - ಶೇ.6
ಪಾಕಿಸ್ತಾನವನ್ನು ಭಾರತ ನಿಭಾಯಿಸುತ್ತಿರುವ ರೀತಿ ಸರಿಯಾಗಿದೆಯೇ?
ಹೌದು - ಶೇ.64
ಇಲ್ಲ - ಶೇ.30
ಗೊತ್ತಿಲ್ಲ - ಶೇ.6
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.