
ಲಂಡನ್: ಅಮೆರಿಕನ್ ನಟಿ, ಬ್ರಿಟನ್‌ನ ಯುವರಾಜ ಹ್ಯಾರಿಯವರ ಪತ್ನಿ ಮೇಘನ್ ಮರ್ಕೆಲ್ ರಾಜಮನೆತನದ ಸಂಪ್ರದಾಯ ಮುರಿದು ತನ್ನ ಕಾರಿನ ಬಾಗಿಲನ್ನು ತಾನೇ ಹಾಕಿರುವುದು ಈಗ ಬಾರಿ ಸಂಚಲನ ಮೂಡಿಸಿದೆ.
ಬ್ರಿಟನ್‌ನಲ್ಲಿ ಈಗಲೂ ರಾಜಮನೆತನಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇದೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಆಟ್ಸ್‌ರ್‍ನಲ್ಲಿ ವಸ್ತು ಪ್ರದರ್ಶನ ಉದ್ಘಾಟನೆಗೆ ಮೇಘನ್ ಆಗಮಿಸಿದ್ದರು.
ಇದೇ ಮೊದಲ ಬಾರಿ ಏಕಾಂಗಿಯಾಗಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೇಘನ್ ಐಶಾರಾಮಿ ಕಾರಿನಿಂದ ಇಳಿಯುತ್ತಿದ್ದಂತೆ ಆಕೆಯನ್ನು ವ್ಯಕ್ತಿಯೊಬ್ಬರು ಹಸ್ತಲಾಘವ ನೀಡಿ ಸ್ವಾಗತಿಸುತ್ತಾರೆ.
ಇನ್ನೇನು ಮುಂದೆ ಬರಬೇಕೆನ್ನುವಷ್ಟರಲ್ಲಿ ಹಿಂದಕ್ಕೆ ನೋಡದೆ, ಅಭ್ಯಾಸ ಬಲದಂತೆ ಮೇಘನ್ ಸ್ವತಃ ತನ್ನ ಕೈಯಿಂದಲೇ ಕಾರಿನ ಬಾಗಿಲು ತಳ್ಳಿ, ಬಾಗಿಲು ಮುಚ್ಚಿದರು. ಈ ಕುರಿತ ವೀಡಿಯೊ ವೈರಲ್ ಆಗಿದ್ದು, ಭಾರಿ ಪರ-ವಿರೋಧ ಚರ್ಚೆಗಳು ನಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.