ವಿಧಾನಸಭೆಯಲ್ಲಿ ಬೀಫ್ ಪೇ ಚರ್ಚಾ: ಗೋಮಾಂಸ ಸೇವಿಸುತ್ತಾ ಚರ್ಚೆ ನಡೆಸಿದ ಶಾಸಕರು

By Suvarna Web DeskFirst Published Jun 8, 2017, 4:09 PM IST
Highlights

ಕೇಂದ್ರ ಸರ್ಕಾರ ಹೊರಡಿಸಿದ ಗೋಹತ್ಯೆ ನಿಷೇಧ ಅಧಿಸೂಚನೆ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆಯಾಗುತ್ತಿದೆ. ಕೇರಳ ವಿಧಾನಸಭೆಯಲ್ಲಿಂದು ಬಿಸಿಬಿಸಿಯಾದ ಬೀಫ್ ಫ್ರೈ ತಿನ್ನುವುದರ ಮೂಲಕ ಚರ್ಚೆ ಪ್ರಾರಂಭಿಸಲಾಗಿದೆ.

ನವದೆಹಲಿ (ಜೂ.08): ಕೇಂದ್ರ ಸರ್ಕಾರ ಹೊರಡಿಸಿದ ಗೋಹತ್ಯೆ ನಿಷೇಧ ಅಧಿಸೂಚನೆ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆಯಾಗುತ್ತಿದೆ. ಕೇರಳ ವಿಧಾನಸಭೆಯಲ್ಲಿಂದು ಬಿಸಿಬಿಸಿಯಾದ ಬೀಫ್ ಫ್ರೈ ತಿನ್ನುವುದರ ಮೂಲಕ ಚರ್ಚೆ ಪ್ರಾರಂಭಿಸಲಾಗಿದೆ.

ಕೇರಳ ವಿಧಾನಸಭೆಯಲ್ಲಿ ಪ್ರತಿದಿನ 11 ಗಂಟೆಗೆ ಬೀಫ್ ನೀಡಲಾಗುತ್ತದೆ. ಆದರೆ ಇವತ್ತು ಇದೇ ವಿಚಾರವಾಗಿ ಚರ್ಚೆಯಿದ್ದಿದ್ದರಿಂದ 10 ಕೆಜಿ ಬೀಫನ್ನು ಬೆಳಿಗ್ಗೆಯೇ ತರಲಾಗಿತ್ತು. ಸದನದಲ್ಲಿ ಚರ್ಚೆ ಆರಂಭವಾಗುವುದಕ್ಕೂ ಮುನ್ನ ಶಾಸಕರು ಬೀಫನ್ನು ಉಪಾಹಾರವಾಗಿ ಸೇವಿಸಿದರು ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳಿದ್ದಾರೆ.  

ವಿಧಾನಸಭೆಯಲ್ಲಿ ಚರ್ಚೆಯ ಅವಧಿಯಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಗೋಹತ್ಯೆ ನಿಷೇಧದ ವಿರುದ್ಧ ಗೊತ್ತುವಳಿ ಮಂಡಿಸಿದರು. ಕೇಂದ್ರ ಸರ್ಕಾರದ ಹೊಸ ನಿಯಮದಿಂದ  ಏನನ್ನು ತಿನ್ನಬೇಕು ಎನ್ನುವ ಜನರ ವೈಯಕ್ತಿಕ ಆಯ್ಕೆಯ ಉಲ್ಲಂಘಿಸಿದಂತಾಗುತ್ತದೆ. ಕೇರಳ ಸೇರಿದಂತೆ ದೇಶದೆಲ್ಲೆಡೆ ಕೃಷಿಕ ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತದೆ ಎಂದು ಪಿನರಾಯಿ ವಿಜಯನ್ ಹೇಳಿದ್ದಾರೆ.  

click me!