ಹೊರಟ್ಟಿ ಹೇಳಿಕೆ ಹೊತ್ತಿಸಿದ ಬೆಂಕಿ ಶಮನಕ್ಕೆ ಅಖಾಡಕ್ಕಿಳಿದ ರಾಹುಲ್!

By Web DeskFirst Published May 18, 2019, 4:08 PM IST
Highlights

ವಿಧಾನ ಪರಿಷತ್ ಸದಸ್ಯ  ಬಸವರಾಜ್ ಹೊರಟ್ಟಿ ಭಿನ್ನಮತದ ಹೇಳಿಕೆ ನೀಡಿದ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ಆರಂಭವಾಗಿವೆ.

ಬೆಂಗಳೂರು(ಮೇ 18.) ಬಸವರಾಜ ಹೊರಟ್ಟಿ ಹೇಳಿಕೆ ನಂತರ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟಾಗಿದೆ. ಭಿನ್ನಮತ ಶಮನಕ್ಕೆ ಮುಂದಾದ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ನಾಯಕರಿಗೆ ಬುಲಾವ್ ನೀಡಿದೆ.

"

ಮೈತ್ರಿ ಗೊಂದಲ ಶಮನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇ. 19 ರಂದು ತುರ್ತು ಸಭೆ ಕರೆದಿದ್ದಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿ ಕಾಂಗ್ರೆಸ್ ನಾಯಕರಿಗೆ ತುರ್ತು ಬುಲಾವ್ ನೀಡಿದ್ದಾರೆ.

ಮೈತ್ರಿ ಖತಂ ಅಥವಾ ಖಾಯಂ?: ನಿಲುವು ಪ್ರಕಟಿಸಿದ ದೇವೇಗೌಡ್ರು

ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುವ ಸಭೆ ನಡೆಯಲಿದ್ದು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಉತ್ತರ ಹುಡುಕುವ ಕೆಲಸ ಮಾಡಲಾಗುತ್ತದೆ ಎನ್ನಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!