ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್

By Suvarna Web DeskFirst Published Mar 30, 2018, 1:35 PM IST
Highlights

ರೈಲ್ವೆ ಇಲಾಖೆ ಉದ್ಯೋಗಿಗಳು ಅನೇಕ ಸಮಯದಿಂದ ಕಾಯುತ್ತಿದ್ದ ಅನುಕೂಲವೊಂದು ಇದೀಗ ಅವರಿಗೆ ದೊರೆಯುತ್ತಿದೆ. 7ನೇ ವೇತನ ಯೋಗದ ಅನ್ವಯ ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ಅನೇಕ ರೀತಿಯ ಅನುಕೂಲತೆಗಳು ದೊರೆಯುತ್ತಿದೆ.

ನವದೆಹಲಿ : ರೈಲ್ವೆ ಇಲಾಖೆ ಉದ್ಯೋಗಿಗಳು ಅನೇಕ ಸಮಯದಿಂದ ಕಾಯುತ್ತಿದ್ದ ಅನುಕೂಲವೊಂದು ಇದೀಗ ಅವರಿಗೆ ದೊರೆಯುತ್ತಿದೆ. 7ನೇ ವೇತನ ಯೋಗದ ಅನ್ವಯ ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ಅನೇಕ ರೀತಿಯ ಅನುಕೂಲತೆಗಳು ದೊರೆಯುತ್ತಿದೆ.

ಅದರಲ್ಲಿ  ಎಲ್’ಟಿಸಿ ಸೌಲಭ್ಯವೂ ಒಂದಾಗಿದೆ.  ಲೀವ್ ಟ್ರಾವೆಲ್ ಕನ್ಸಿಶನ್ ಪಡೆಯುವಂತಹ ಸೌಲಭ್ಯವಾಗಿದೆ. ಇದು ರೈಲ್ವೆ ಇಲಾಖೆ ಉದ್ಯೋಗಿಗಳ ಕುಟುಂಬಸ್ಥರು ಕೂಡ ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಅನುಕೂಲತೆಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ  ರೈಲ್ವೆ ಸಚಿವಾಲಯವು ಈ ಎಲ್’ಟಿಸಿ  ಪಡೆದುಕೊಳ್ಳುವುದು ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ಬಿಟ್ಟಿರುವುದು. ಅವರು ಪಡೆದುಕೊಳ್ಳಬಹುದು. ಅಥವಾ ಪಡೆದುಕೊಳ್ಳದೇ ಇರಬಹುದಾಗಿದೆ. ಇದು ಆಪ್ಶನಲ್ ವ್ಯವಸ್ಥೆಯಾಗಿದೆ ಎಂದು ಹೇಳಿದೆ.

ಈಗಾಗಲೇ ರೈಲ್ವೆ ಇಲಾಖೆಯ ಉದ್ಯೋಗಿಗಳಿಗೆ ಅನೇಕ ರೀತಿಯಾದ ಸೌಲಭ್ಯಗಳಿದ್ದು, ಇದೀಗ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಹೊಸ ಟ್ರಾವೆಲ್ ಕನ್ಸಿಶನ್ ಪಾಸ್ ಕೂಡ ದೊರಕುತ್ತಿದೆ.

click me!