
ನವದೆಹಲಿ(ಮಾ.30): ಕೊನೆಗೂ 16 ವರ್ಷಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಮಹತ್ವಕಾಂಕ್ಷೆಯ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ‘ಒಂದು ದೇಶ, ಒಂದು ತೆರಿಗೆ’ ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಸುಮಾರು 9 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಮತದಾನದ ಮೂಲಕ ಜಿಎಸ್ಟಿ ಮಸೂದೆ ಅಂಗೀಕಾರಿಸಲಾಯ್ತು. ಇನ್ನು ರಾಜ್ಯಗಳಲ್ಲೂ ಐತಿಹಾಸಿಕ ಮಸೂದೆ ಪಾಸ್ ಆಗಬೇಕಿದೆ. ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೆ ತರಲು ಕೇಂದ್ರ ಪ್ಲಾನ್ ಮಾಡಿದೆ.
ಲಕ್ಸುರಿ ಕಾರು, ತಂಪು ಪಾನೀಯ, ಮಿನಿರಲ್ ವಾಟೡ
ಪಾನ್ ಮಸಾಲಾ, ಬೀಡಿ-ಸಿಗರೇಟು, ಬ್ರಾಂಡೆಡ್ ಆಭರಣ
ಬ್ರಾಂಡೆಡ್ ಬಟ್ಟೆ, ಕೇಬಲ್ ಟಿವಿ, ಕೋರಿಯರ್ ಸರ್ವಿಸ್
ಎಲ್ಪಿಜಿ, ಮೊಬೈಲ್ ಕರೆ, ವಿಮಾನಯಾನ, ರೈಲ್ವೇ ಪ್ರಯಾಣ
ವಸತಿ ಕಟ್ಟಡಗಳ ಬಾಡಿಗೆಯಿಂದ ಬರುವ ಆದಾಯದ ಮೇಲೆ ತೆರಿಗೆ
-ಕಾರು, ಬೈಕ್ಗಳ ಬೆಲೆಯಲ್ಲಿ ಇಳಿಕೆ
-ಸಿಮೆಂಟ್, ಪೇಂಟ್, ಆಟಿಕೆಗಳು
-ಸಿನಿಮಾ ಟಿಕೆಟ್ಸ್
-ಫ್ಯಾನ್ ಮತ್ತು ಏರ್ ಕೂಲರ್
-ವಾಟರ್ ಹೀಟರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು
ಪ್ರಧಾನಿ ಮೋದಿಯವರಂತೂ ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಹು ನೀರಿಕ್ಷಿತ ಜಿಎಸ್ಟಿ ಬಿಲ್ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಜುಲೈನಲ್ಲಿ ಜಾರಿಯಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.