ಅಂಜೂರದಿಂದ ಆಗುವ ಅನುಕೂಲಗಳು

By Suvarna Web DeskFirst Published Dec 5, 2016, 3:03 PM IST
Highlights

ಅಂಜೂರ ಸೇವಿಸಿದರೆ ಆರೋಗ್ಯವಂತರಾಗುತ್ತೀರಾ

ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.
ಇದರಲ್ಲಿ ಆರೋಗ್ಯಕರ ಗುಣಗಳಿವೆ. ಹೇರಳವಾದ ಖನಿಜಾಂಶಗಳು ಹಾಗೂ ವಿಟಮಿನ್‌ಗಳಿಗಾಗಿ ಈ ಹಣ್ಣನ್ನು ತಿನ್ನಿರಿ. ಇದರಲ್ಲಿರುವ ವಿಟಮಿನ್‌ ಎ, ವಿಟಮಿನ್‌ ಬಿ1, ವಿಟಮಿನ್‌ ಬಿ2, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕದ ಅಂಶ, ಸೋಡಿಯಂ,ಕ್ಲೋರೀನ್‌ಗಳಿರುತ್ತವೆ.
ಅಂಜೂರ ಹಣ್ಣನ್ನು ತಿಂದರೆ ಉಪಯೋಗಗಳೇನು
ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ. ರಕ್ತದಲ್ಲಿರುವ ಟ್ರಿಗ್ಲಸೆರೈಡ್‌ ಅಂಶವನ್ನು ಕಡಿಮೆ ಮಾಡುತ್ತದೆ. ಈ ಅಂಶವು ಹೆಚ್ಚಾದರೆ ತೂಕ ಹಾಗೂ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತಿಂದರೆ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ.
ಇದರಲ್ಲಿ ನಾರಿನಂಶ ಹೆಚ್ಚು ಇರುವುದರಿಂದ ಹಸಿವನ್ನು ನಿಯಂತ್ರಿಸುತ್ತದೆ. ಮೆನೋಪಸ್‌ ನಂತರ ಪ್ರತಿದಿನವು ಈ ಅಂಜೂರ ತಿನ್ನುವುದು ಒಳಿತು. ಇದರಿಂದ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ತಡೆಗಟ್ಟಬಹುದು. ಲವ್‌ ಹಾರ್ಮೋನ್‌ಗಳು ಹೆಚ್ಚಾಗುವಂತೆ ಮಾಡಿ ಲೈಂಗಿಕ ನಿಶ್ಯಕ್ತಿಯನ್ನು ಹೋಗಲಾಡಿಸಿ. ಲೈಂಗಿಕ ಕ್ರಿಯೆಗೆ ಸಹಕಾರಿಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳ ಬಲಗೊಳ್ಳುತ್ತವೆ. ಆರೋಗ್ಯಕ್ಕೂ ಒಳ್ಳೆಯದು.
ಇದು ತಿನ್ನಲು ಸಿಹಿಯಾಗಿದ್ದರೂ ಮಧುಮೇಹಿಗಳಿಗೆ ತೊಂದರೆ ಮಾಡದು. ಮೇಲಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಅಂತಹ ಸಾಮರ್ಥ್ಯವನ್ನು ಹೊಂದಿದೆ.

click me!