ವ್ಯಭಿಚಾರ ಕೇಸಲ್ಲಿ ಮಹಿಳೆಗೆ ವಿನಾಯ್ತಿ : ಕಾನೂನು ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

By Suvarna Web DeskFirst Published Dec 9, 2017, 2:55 PM IST
Highlights

157 ವರ್ಷಗಳ ಹಿಂದಿನ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಲಿದ್ದೇವೆ ಎಂದು ತಿಳಿಸಿರುವ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳೊಳಗೆ  ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.

ನವದೆಹಲಿ(ಡಿ.9): ವ್ಯಭಿಚಾರ ಪ್ರಕರಣಗಳಲ್ಲಿ ಪುರುಷರನ್ನು ಮಾತ್ರ ಶಿಕ್ಷಿಸುವ ಬ್ರಿಟಿಷ್ ಕಾಲದ ಕಾನೂನಿನ ಸಾಂವಿಧಾನಿಕ ಮಾನ್ಯತೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ. ಸಮ್ಮತಿಯ ಲೈಂಗಿಕ ಸಂಬಂಧಗಳಲ್ಲಿ ಮಹಿಳೆಯೂ ಸಮಾನ ಪಾಲುದಾರಳಾಗಿದ್ದಾಗ ಪುರುಷರ ಮಾತ್ರ ಶಿಕ್ಷಿಸುವ ಕುರಿತಂತೆ ಇದೀಗ ಪ್ರಶ್ನೆಗಳು ಉದ್ಭವವಾಗಿವೆ.

157 ವರ್ಷಗಳ ಹಿಂದಿನ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಲಿದ್ದೇವೆ ಎಂದು ತಿಳಿಸಿರುವ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳೊಳಗೆ  ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.

ಮಹಿಳೆಯನ್ನು ಸರಕಿನಂತೆ ಪರಿಗಣಿಸುವುದು ಲಿಂಗ ಸಮಾನತೆಯ ಸಿದ್ಧಾಂತ ಮತ್ತು ಸಮಾನತೆಯ ಕುರಿತ ಸಾಂವಿಧಾನಿಕ ಹಕ್ಕಿನ ಸಿದ್ಧಾಂತಕ್ಕೆ ವಿರುದ್ಧವಾದುದು ಎಂದು ಕೋರ್ಟ್ ಹೇಳಿದೆ.

click me!