
ವಾಷಿಂಗ್ಟನ್(ಅ.24): ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಆರೋಪಗಳ ಮೇಲೆ ಆರೋಪಗಳು ಎದುರಾಗುತ್ತಿವೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಮಹಿಳೆಯರು ಟ್ರಂಪ್ ಮೇಲೆ ಆರೋಪ ಮಾಡಿದ್ದು, ಈಗ ಮತ್ತೊಂದು ಗಂಭೀರ ಆರೋಪ ಟ್ರಂಪ್ ಅವರನ್ನು ಸುತ್ತಿಕೊಂಡಿದೆ.
ವಯಸ್ಕರ ಸಿನಿಮಾ ತಾರೆ 'ಜೆಸ್ಸಿಕಾ ಡ್ರಾಕೆ' ಎಂಬುವವರನ್ನು ಟ್ರಂಪ್ 2006ರಲ್ಲಿ ಗಾಲ್ಫ್ ಪಂದ್ಯಾವಳಿಯಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಟಿಯನ್ನು ನೋಡಿದ ತಕ್ಷಣವೇ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ ಒಂದು ಹೋಟೆಲ್'ಗೂ ಕೂಡ ಕರೆದುಕೊಂಡು ಹೋಗಿದ್ದರು. ಹೋಟಲ್'ಗೆ ಹೋದ ವೇಳೆಯಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯಿಲ್ಲದೆ ಚುಂಬಿಸಿದ್ದರು.
ನಂತರ 'ಜೆಸ್ಸಿಕಾ ಅವರ ಪೋರ್ನ್ ಸಿನಿಮಾಗಳ ಬಗ್ಗೆಯೂ ಟ್ರಂಪ್ ಕೇಳಿದ್ದರು. ತದ ನಂತರ ಜೆಸ್ಸಿಕಾ ಮನೆಗೆ ಹಿಂತಿರುಗಿದ ಮೇಲೆ ಜಿಸ್ಸಿಕಾ ಅವರಿಗೆ ಕರೆ ಮಾಡಿದ ಟ್ರಂಪ್ ಪಾರ್ಟಿಗೆ ಬರುವಂತೆ ಆಹ್ವಾನಿಸಿ ಏನು ಬೇಕು. ಎಷ್ಟು ತೆಗೆದುಕೊಳ್ಳುತ್ತೀರಿ ಎಂದು ಕೇಳಿದ್ದರು. ನಟಿ ಆಹ್ವಾವನ್ನು ನಿರಾಕರಿಸಿದ್ದಳು. ಮತ್ತೊಮ್ಮೆ ಕರೆ ಮಾಡಿದ ಟ್ರಂಪ್ 10 ಸಾವಿರ ಡಾಲರ್ ನೀಡುವುದಾಗಿ ಹೇಳಿ ನೀವು ಒಪ್ಪಿಕೊಂಡರೆ ತಮ್ಮ ಖಾಸಗಿ ವಿಮಾನದಲ್ಲೇ ನಮ್ಮ ಮನೆಗೆ ಬರಬಹುದು ಎಂದು ಆಹ್ವಾನವಿತ್ತಿದ್ದರು' ಎಂದು ಜೆಸ್ಸಿಕಾ ಆರೋಪ ಮಾಡಿದ್ದಾರೆ.
ಜೆಸ್ಸಿಕಾ ಅವರ ಎಲ್ಲ ಆರೋಪವನ್ನು ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು ಈ ಹೇಳಿಕೆ ಹಾಸ್ಯಾಸ್ಪದ ಹಾಗೂ ಸುಳ್ಳುನಿಂದ ಕೂಡಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.