ಗೋರಕ್ಷಣೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳಬೇಡಿ: ಯೋಗಿ ಆದಿತ್ಯನಾಥ್

By Suvarna Web DeskFirst Published Jul 1, 2017, 12:17 PM IST
Highlights

ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಸಾರ್ವಜನಿಕರು ಮಾಡಕೂಡದೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದ್ದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆ ಹೊರತು ಕಾನು ನನ್ನು ಕೈಗೆತ್ತಿಕೊಳ್ಳಬಾರದೆಂದು ಯೊಗಿ ಆದಿತ್ಯನಾಥ್ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಮದರ್ಶನದಲ್ಲಿ ಹೇಳಿದ್ದಾರೆ.

ಲಕ್ನೋ: ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಸಾರ್ವಜನಿಕರು ಮಾಡಕೂಡದೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದ್ದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆ ಹೊರತು ಕಾನು ನನ್ನು ಕೈಗೆತ್ತಿಕೊಳ್ಳಬಾರದೆಂದು ಯೊಗಿ ಆದಿತ್ಯನಾಥ್ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಮದರ್ಶನದಲ್ಲಿ ಹೇಳಿದ್ದಾರೆ.

Latest Videos

ನಾವು ಕಸಾಯಿಖಾನೆಗಳನ್ನು ಮುಚ್ಚುತ್ತಿಲ್ಲ, ಆದರೆ ನಿಯಮಗಳನ್ನು ಪಾಲಿಸದ ಕಸಾಯಿಖಾನೆಗಲ ವಿರುದ್ಧ ಕ್ರಮಗಳನ್ನು ಜರುಗಿಸುತ್ತಿದ್ದೇವೆಯೆಂದು ಯೋಗಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಯೋಗಿ, ಈ ವಿಷಯವು ಸುಪ್ರೀಂ ಕೋರ್ಟ್  ಅಂಗಳದಲ್ಲಿದೆ. ಬಾಬ್ರಿ ಮಸೀದಿ- ರಾಮಮಂದಿರ ವಿವಾದವನ್ನು ಉಭಯ ಸಮುದಾಯಗಳು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ಅದಕ್ಕಾಗಿ ಅಯೋಧ್ಯೆಯ ಜನರಲ್ಲಿ ಭಾತೃತ್ವದ ಭಾವನೆಯನ್ನು ಬೆಳೆಸಲು ನಾವು ಪ್ರಯತ್ನಿಸುತ್ತಿದ್ದೇವೆ, ಎಂದು ಹೇಳಿದ್ದಾರೆ.

click me!