
ಬೆಂಗಳೂರು (ಏ.15): ಶೀಘ್ರದಲ್ಲೇ ಬೆಂಗಳೂರಿನ ಕೆಲವು ಸಿಗ್ನಲ್’ಗಳು ಬುದ್ದಿವಂತರಾಗಲಿವೆ, ನಗರದಲ್ಲಿರುವ 330 ಸಿಗ್ನಲ್’ಗಳ ಪೈಕಿ 25 ಸಿಗ್ನಲ್’ಗಳನ್ನು ನೂತನ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲಾಗುವುದೆಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸಂಚಾರ ದಟ್ಟನೆಗೆ ಅನುಗುಣವಾಗಿ ಸಿಗ್ನಲ್’ಗಳು ಕಾರ್ಯಾಚರಿಸುವಂತಾಗಲು ‘ಎಡಾಪ್ಟಿವ್’ ತಂತ್ರಜ್ಞಾನವನ್ನು ಅಳವಡಿಸಲಾಗುವುದೆಂದು ದಿ ಹಿಂದೂ ವರದಿ ಮಾಡಿದೆ.
ಸಿಗ್ನಲ್’ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ವಾಹನಗಳ ಸಾಲನ್ನು ಪರಿಶೀಲಿಸುವುದು. ರಸ್ತೆಯಲ್ಲಿ ಅಳವಡಿಸಲಾದ ಸೆನ್ಸಾರ್’ಗಳ ಮೂಲಕ ಜಂಕ್ಷನನ್ನು ಹಾದು ಹೋದ ವಾಹನಗಳ ಪ್ರಮಾಣವನ್ನು ಅಳೆಯುವ ಮೂಲಕ ಸಿಗ್ನಲ್’ಗಳು ಸ್ವಯಂ ಕೆಂಪು-ಹಸಿರು ದೀಪಗಳನ್ನು ಹೊಂದಿಸುಕೊಳ್ಳುವುವು, ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್. ಹಿತೇಂದ್ರ ತಿಳಿಸಿದ್ದಾರೆ.
ಹೊಸ ತಂತ್ರಜ್ಷಾನವನ್ನು ಅಳವಡಿಸುವ ಮೂಲಕ ಮಾನವ ಶ್ರಮವನ್ನು ಕಡಿಮೆಗೊಳಿಸಬಹುದಲ್ಲದೇ, ಸಿಗ್ನಲ್’ಗಳಲ್ಲಿ ವಾಹನ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಬಹುದು. ಇದರಿಂದ ವಾಹನ ಸವಾರರಿಗೂ ಇಂಧನ ಉಳಿತಾಯವಾಗುವುದು ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷವೇ ಈ ಕುರಿತು ಕೆಲಸದ ಗುತ್ತಿಗೆಯನ್ನು ನೀಡಲಾಗಿದೆ. ಮೇ ತಿಂಗಳೊಳಗೆ ಕೆಲಸ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ, ಎಂದು ಅವರು ಹೇಳಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಇನ್ನೂ ಹೆಚ್ಚಿನ ಸಿಗ್ನಲ್’ಗಳಿಗೆ ಅದನ್ನು ಅಳವಡಿಸಲಾಗುವುದೆಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.