ಸ್ಯಾಂಡಲ್'ವುಡ್ ನಟಿ ಆತ್ಮಹತ್ಯೆಗೆ ಯತ್ನ ?

Published : Nov 02, 2017, 05:41 PM ISTUpdated : Apr 11, 2018, 12:38 PM IST
ಸ್ಯಾಂಡಲ್'ವುಡ್ ನಟಿ ಆತ್ಮಹತ್ಯೆಗೆ ಯತ್ನ ?

ಸಾರಾಂಶ

ಈ ಬಗ್ಗೆ ನಟಿಯ ಸಹೋದರ  ಮಾಧ್ಯಮಗಳಿಗೆ ಕರೆ ಮಾಡಿ ಇನ್ನು 2 ದಿನಗಳಲ್ಲಿ ಸ್ವತಃ ನಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದಿದ್ದಾರೆ

ಬೆಂಗಳೂರು(ನ.02): ಸ್ಯಾಂಡಲ್'ವುಡ್ ನಟಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂರು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಬಗ್ಗೆ ನಟಿಯ ಸಹೋದರ  ಮಾಧ್ಯಮಗಳಿಗೆ ಕರೆ ಮಾಡಿ ಇನ್ನು 2 ದಿನಗಳಲ್ಲಿ ಸ್ವತಃ ನಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದಿದ್ದಾರೆ.  ಬೆಂಗಳೂರಿನ ಹೊರವಲಯದ ಮಠದಲ್ಲಿ ನಡೆದ ರಾಸಲೀಲೆ ಪ್ರಕರಣದಲ್ಲಿ ಈ ನಟಿ ಭಾಗಿಯಾಗಿದ್ದರು ಎಂಬ ವದಂತಿ ಎಲ್ಲಡೆ ಹರಡಿತ್ತು. ಸ್ವತಃ ನಟಿಯೇ ವಾಹಿನಿಗೆ ಕರೆ ಮಾಡಿ ದೃಶ್ಯದಲ್ಲಿರುವುದು ನಾನಲ್ಲ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಳು.

ಶಿವಮೊಗ್ಗದ ತೀರ್ಥಹಳ್ಳಿಯಳಾದ ಈ ನಟಿ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದಾಳೆ. ಬಾವಾಜಿ ಪ್ರೊಡಕ್ಷನ್ಸ್'ನ "141" ಎಂಬ ಬಿ ಗ್ರೇಡ್ ಸಿನಿಮಾದಲ್ಲಿ ಈಕೆಯೇ ನಾಯಕಿ. ಅದರಲ್ಲಿ ಸಲಿಂಗ ರತಿಯ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದಾಳೆ. "ಸಂತೋಷಕ್ಕೆ" ಎಂಬ ಚಿತ್ರದ ಆರು ನಾಯಕಿಯರಲ್ಲಿ ಈಕೆಯೂ ಒಬ್ಬಳು. ತುಳು ಭಾಷೆಯ "ಡ್ಯಾನ್ಸ್ ಕುಡ್ಲ ಡ್ಯಾನ್ಸ್" ಸಿನಿಮಾದಲ್ಲೂ ಈಕೆ ನಾಯಕಿ. ಚಿತ್ರದುರ್ಗದ ಸಂಬಂಧಿಯೊಬ್ಬರ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಈ ಹುಡುಗಿಯ ಮೊದಲ ಚಿತ್ರ "ಖತರ್ನಾಕ್". ಇದರಲ್ಲಿ ರೂಪಿಕಾ ಜೊತೆ ನಟಿಸಿರುತ್ತಾಳೆ. ಆ ಬಳಿಕ ಕೆಲ ಚಿತ್ರಗಳಲ್ಲಿ ನಟಿಸಿದ್ದಾಳೆ. ಶುಭಾ ಪೂಜಾ ಜೊತೆ ಸ್ನೇಹಿತೆಯಾಗಿ ನಟಿಸಿದ "ಅದೃಷ್ಟ' ಚಿತ್ರವು ಈಕೆಯ ದುರದೃಷ್ಟಕ್ಕೆ ಬಿಡುಗಡೆಯೇ ಆಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?