
ತಿರುವನಂತಪುರ(ಜು.14): ಕೇರಳ ಮೂಲದ ಬಹುಭಾಷಾ ನಟಿ ಅವರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಬಂಧನ ವಿಚಾರವಾಗಿಇದೇ ಮೊದಲ ಬಾರಿಗೆ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿದ ಸಂತ್ರಸ್ತ ನಟಿ, ‘ಈ ಪ್ರಕರಣ ಸಂಬಂಧ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರುನೀಡಿರಲಿಲ್ಲ. ಆದರೆ, ನಟ ದಿಲೀಪ್ ಕುಮಾರ್ ಅವರ ಬಂಧನ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ,’ ಎಂದು ಹೇಳಿದ್ದಾರೆ.
‘ನಾನು ಮತ್ತು ದಿಲೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದೆವು. ಕೆಲವು ವೈಯಕ್ತಿಕ ವೈಮನಸ್ಯಗಳಿಂದ ನಾವಿಬ್ಬರೂ ದೂರವಾಗಿದ್ದೇವೆ. ಆದರೆ, ಈ ಪ್ರಕರಣದಲ್ಲಿ ನಾನು ಹೆಸರನ್ನೂ ಸಹ ಉಲ್ಲೇಖಿಸಿದೂರು ದಾಖಲಿಸಿರಲಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದಿಲೀಪ್ ಕುಮಾರ್ ಹೇಳಿದ್ದಾರೆ. ಸತ್ಯ ಹೊರ ಬರಲೇಬೇಕಿದ್ದು, ದಿಲೀಪ್ ಕುಮಾರ್ ನಿರಪರಾಧಿಯಾಗಿದ್ದರೂ, ಸತ್ಯಶೀಘ್ರವೇ ಹೊರಬರಬೇಕು. ಶೀಘ್ರದಲ್ಲೇ ಸತ್ಯ ಹೊರಬೀಳಲಿದೆ,’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.