ಸೋಶಿಯಲ್ ಮೀಡಿಯಾದಲ್ಲಿ ಸೋನಂ-ಭಾಗವತ್ ಯುದ್ಧ/ ಸೋನಂ ಟ್ವೀಟ್ ಗೆ ಹರಿದು ಬಂದ ಪ್ರತಿಕ್ರಿಯೆ/ ತಲಾಖ್ ಮತ್ತು ವಿಚ್ಛೇದನದ ಬಗ್ಗೆ ಹೇಳಿಕೆ ನೀಡಿದ್ದ ಮೋಹನ್ ಭಾಗವತ್
ನವದೆಹಲಿ(ಫೆ. 17) ಭಾನುವಾರ ತಲಾಕ್ ಮತ್ತು ವಿಚ್ಚೇದನ ಕುರಿತು ಹೇಳಿಕೆ ನೀಡಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್, ಇತ್ತೀಚಿಗೆ ಅಧಿಕ ಶಿಕ್ಷಣ ಹೊಂದಿದ ಮತ್ತು ಸಂಪನ್ನತೆ ಹೊಂದಿದ ಕುಟುಂಬಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಲಾಕ್ ಪ್ರಕರಣಗಳು ಕೇಳಿ ಬರುತ್ತಿವೆ, ಏಕೆಂದರೆ ಶಿಕ್ಷಣ ಹಾಗೂ ಸಂಪನ್ನತೆ ಅಹಂಕಾರ ಹೆಚ್ಚುಸುತ್ತಿತ್ತ ಕುಟುಂಬದಲ್ಲಿ ಬಿರುಕು ಮೂಡಿಸಲು ಕಾರಣವಾಗಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ, ಸೋನಂ ಕಪೂರ್ ತಿಳಿವಳಿಕೆಯುಳ್ಳ ವ್ಯಕ್ತಿ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಇದೊಂದು ಮೂರ್ಖತನದ ಹೇಳಿಕೆ ಎಂದಿದ್ದರು.
ಸೋನಂ ಮಾಡಿರುವ ಈ ಟ್ವೀಟ್ ಗೆ ಇದೀಗ ವ್ಯಾಪಕ ಪ್ರತಿಕ್ರಿಯೆಗಳು ಬಂದವು. ಕೆಲವರು ಬೆಂಬಲಕ್ಕೆ ನಿಂತಯರೆ ಕೆಲವರು ಭಾಗವತ ಪರ ನಿಂತರು.
ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿದ್ದ ಮೋಹನ್ ಭಾಗವತ್, ಇತ್ತೀಚಿಗೆ ತಲಾಕ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಅರ್ಥಹೀನ ವಿಷಯ ಮೇಲೆ ಜಗಳ ಕಾಯುತ್ತಿದ್ದಾರೆ ಎಂದು ಭಾಷಣದಲ್ಲಿ ಹೇಳಿದ್ದರು.
ಒಂದು ಕಡೆ ಸೋನಂ ಈ ರೀತಿಯ ಹೇಳಿಕೆ ನೀಡಿದರೆ ನೆಟ್ಟಿಗರು ಮಾತ್ ರ ಸುಮ್ಮನೆ ಕೂರಲ್ಲ. ಸೋನಂ ತಂದೆ ಅನಿಲ್ ಕಪೂರ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಇರುವ ಪೋಟೋವನ್ನು ಶೇರ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.
ಮೊದಲು ನಿಮ್ಮ ಕೆಲಸ ನೋಡಿಕೊಳ್ಳಿ. ನಿಮ್ಮ ಪೂರ್ವಾಪರದ ಬಗ್ಗೆ ತಿಳಿದುಕೊಳ್ಳಿ ಎಂದು ಸೋನಂ ಕಪೂರ್ ಗೆ ಚಾಟಿ ಬೀಸಿದರು.