
ಬೆಂಗಳೂರು, [ಫೆ.17]: ಕುತೂಹಲ ಮೂಡಿಸಿರೋ ವಿಧಾನಮಂಡಲ ಜಂಟಿ ಅಧಿವೇಶನ ಸೋಮವಾರದಿಂದ ಶುರುವಾಗಿದ್ದು, ಮೊದಲ ದಿನವಾದ ಇವತ್ತು ರಾಜ್ಯಪಾಲ ವಜುಭಾಯ್ ವಾಲಾ, ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು.
ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರ ಕನ್ನಡ ಮತ್ತು ಇಂಗ್ಲೀಷ್ ಮುದ್ರಿತ ಭಾಷಣದ ಪ್ರತಿಯನ್ನು ನೀಡಿದೆ.. ಆದ್ರೆ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡ್ತಿದ್ದಾರೆ ಅಂತ ವಿರೋಧಿಸಿದರು.
ಅಧಿವೇಶನದಲ್ಲಿ ರಾಜ್ಯಪಾಲ ಭಾಷಣ: ಕೃಷಿಗೆ ಆದ್ಯತೆ, ಕಾನೂನು ಸುವ್ಯವಸ್ಥೆಗೆ ಕ್ರಮ
ಇದರ ಗದ್ದಲದ ನಡುವೆಯೇ ಸರ್ಕಾರದ ಮುಂದಿನ ಕಾರ್ಯ ಯೋಜನೆಗಳು ಮತ್ತು ಸಾಧನೆಗಳನ್ನು ಬಿಚ್ಚಿಟ್ಟರು. ಆದ್ರೆ, ಎಲ್ಲೂ ಕೂಡ ವಿವಾದಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿಲ್ಲ. ಕರ್ನಾಟಕ ಆರ್ಥಿಕ ನಿರ್ವಹಣೆಯಲ್ಲಿ ದೂರದೃಷ್ಟಿ ಹೊಂದಿರುವ ರಾಜ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2ನೇ ಸಾಲಿಗೆ ಸೀಮಿತವಾದ ನೂತನ ಸಚಿವರು
ಸಚಿವರಾಗಿಯೇ ಸದನ ಪ್ರವೇಶಿಸುವ ಶಪಥ ಮಾಡಿದ್ದ ಅರ್ಹರು, ಸಚಿವರಾಗಿಯೇ ಶಕ್ತಿಸೌಧವನ್ನ ಪ್ರವೇಶಿಸಿದ್ದು, ಎಲ್ಲಾ ನೂತನ ಸಚಿವರಿಗೆ 2ನೇ ಸಾಲಿನಲ್ಲೇ ಕುಳಿತುಕೊಳ್ಳು ಅವಕಾಶ ಕೊಡಲಾಯ್ತು.
ಮೈತ್ರಿ ಸರ್ಕಾರದಲ್ಲಿನ ಅಸಮಧಾನದಿಂದ ಕಾಂಗ್ರೆಸ್-ಜೆಡಿಎಸ್ ತೊರೆದು ಅನರ್ಹರಾಗಿದ್ದ 17 ಜನರು ಮಂತ್ರಿಯಾಗಿ ಸದನಕ್ಕೆ ಬಂದೇ ಬರುತ್ತೇವೆ ಎಂದು ಹೇಳಿದ್ದು, 17 ಜನರ ಪೈಕಿ 9 ಜನರು ಮಂತ್ರಿಯಾಗಿ ಸೋಮವಾರದ ಸದನ ಪ್ರವೇಶಿಸಿದರು.
ಆದ್ರೆ, ಹೊಸಬರು ಎನ್ನುವ ಕಾರಣಕ್ಕೋ ಏನೋ ಗೊತ್ತಿಲ್ಲ. ನೂತನ ಸಚಿವರಿಗೆ ಮೊದಲೇ 2ನೇ ಸಾಲಿನಲ್ಲಿ ಹಾಸನ ಕಾಯ್ದಿರಿಸಿರುವುದು ವಿಶೇಷವಾಗಿದೆ.
ಅಷ್ಟೇ ಅಲ್ಲದೇ ಸಚಿವರಾಗಿ ಬಂದವರು ಸಂಭ್ರಮದಿಂದಲೇ ಇಡೀ ಸದನ ಸುತ್ತಾಡಿದ್ರು.ಶುಭಾಶಯಗಳ ವಿನಿಮಯ ಕೂಡ ಮಾಮೂಲಾಗಿತ್ತು. ಸಿದ್ದರಾಮಯ್ಯ ಕೂಡ ನೂತನ ಶಾಸಕರನ್ನು ಮಾತನಾಡಿಸಿದ್ದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.