ಚಿತ್ರರಂಗದಲ್ಲಿ ಹಿರಿಯಣ್ಣನಂತೆ ಇದ್ದ ಅಂಬರೀಶ್ ಬಗ್ಗೆ ನಟಿ ಶೃತಿ ಇದೀಗ ಮಾತನಾಡಿ ಅವರಿಗೆ ಎರಡು ಮುಖವಿತ್ತು ನೋಡಲು ಒರಟಾದ ಅವರ ಹೃದಯ ಅತ್ಯಂತ ಮೃದು ಎಂಬು ಕಂಬನಿ ಮಿಡಿದಿದ್ದಾರೆ.
ಬೆಂಗಳೂರು : ನೋಡೋದಕ್ಕೆ ಒರಟು. ಒಳಗಿನ ತಿರುಳು ಮಾತ್ರ ಮೃದು. ಜೋರಾಗಿ ಮಾತಾಡಿದರೂ ಯಾಕೆ ಹಾಗೆ ಮಾಡಿದೆ ಅಂತ ಕಾರಣ ಹೇಳೋ ಒಳ್ಳೇತನ. ಅಂಬರೀಷ್ ಅವರ ಜೊತೆ ಆ್ಯಕ್ಟ್ ಮಾಡೋವಾಗ ಹಳ್ಳಿಹಳ್ಳಿಗಳಲ್ಲಿ ನಾನು ನೋಡಿದ್ದು ಅಂತಂದ್ರೆ ಎಷ್ಟೋ ಕಲಾವಿದರನ್ನ ತೆರೆಯಲ್ಲಿ, ತೆರೆಯ ಮೇಲೆ ಮಾತ್ರ ಅವರನ್ನ ನಾಯಕರು ಅಂತ ಒಪ್ಕೊಳ್ತಾರೆ. ತೆರೆಯ ಹಿಂದೆ ಕೂಡ ನಮ್ಮ ನಾಯಕ ಇವ್ನ ಅಂತ ಜನ ಒಪ್ಕೊಳೋದಿದ್ಯಲ್ಲ ಅದು ತುಂಬಾ ಬೆರಳೆಣಿಕೆಯ ಕಲಾವಿದರನ್ನು ಮಾತ್ರ.
ತೆರೆಯ ಹಿಂದೇನೂ ಕೂಡ ಇವರನ್ನು ನಾಯಕರು ಅಂತ ಅಂದುಕೊಳ್ತಾರೆ. ಅಂತಹ ಕಲಾವಿದರಲ್ಲಿ ಅಂಬರೀಷ್ ಕೂಡ ಒಬ್ರು. ಹಾಗಾಗಿ ನಾಯಕರಾದ್ರು. ಸಿನಿಮಾ ರಂಗದಿಂದ ಆಚೆಗ್ಬಂದು ರಾಜಕೀಯದಲ್ಲೂ ಯಾಕೆ ಅವ್ರ ಯಶಸ್ವಿಯಾಗ್ತಾರೆ ಅಂತಂದ್ರೆ ಸಿನಿಮಾದ ಆಚೆಗೂ ಇವರು ನಮ್ಮವರು, ಲೀಡರ್ ಇವ್ನ. ನಮ್ಗೆ ಒಳ್ಳೇದ್ ಮಾಡ್ತಾನೇ ಇವ್ನ. ಅವ್ನ ತುಂಬಾ ಹತ್ರ ಅಂತ ಅನ್ನಿಸ್ತಾರಲ್ಲ. ಹಾಗಾಗಿ ಅವ್ರ ಸಿನಿಮಾದಿಂದ ಹೊರತಾಗಿಯೂ ಒಳ್ಳೆ ಹೆಸರನ್ನ ಮಾಡಿದ್ರು. ಜನರಿಗೆ ಹತ್ರ ಆದ್ರು.
undefined
ಸಾಮಾನ್ಯವಾಗಿ ಸಿನಿಮಾ ಸ್ಟಾರ್ ಅಂತಂದ್ರೆ ಜನರಿಂದ ದೂರ ಇದ್ದಷ್ಟು ಬೆಲೆ. ಜನನಾಯಕರಿಗೆ ಜನರ ಹತ್ರ ಇದ್ದಷ್ಟು ಬೆಲೆ. ಅಂಬರೀಷ್ ಅವ್ರ ಎರಡೂ ಕೂಡ ಹೌದು. ಅಂಬರೀಷ್ ಅವ್ರಿಗೆ ನಾನು ಸಿನಿಮಾ ಕಲಾವಿದ ಅನ್ನೋ ಕಾರಣಕ್ಕೆ ನಾನು ಜನರಿಂದ ಯಾಕ್ ದೂರ ಆಗ್ಬೇಕು. ನನ್ನ ಅಭಿಮಾನಿಗಳ ಹತ್ರ ಇರ್ಬೇಕು ಅಂತ ಬೆರೆಯೋರು ಅಂಬರೀಷೋರು. ಹಾಗಾಗಿ ಅವ್ರ ತೆರೆಯಲ್ಲಿ ಮಾತ್ರ ನಾಯಕರಾಗದೆ. ಚಿತ್ರರಂಗದಲ್ಲಿ ನಡೆಯುವ ಯಾವುದೇ ಸಮಸ್ಯೆಯನ್ನ ಮೊದ್ಲು ತಗೊಂಡು ಹೋಗೋದೇ ಅಂಬರೀಷ್ ಅವ್ರ ಮನೆಗೆ. ಅವ್ರನ್ನು ಬರೀ ಸಿನಿಮಾ ನಾಯಕರು ಅಂತ ಫೀಲ್ ಮಾಡ್ತಿಲ್ಲ.
ಚಿತ್ರರಂಗದ ಕುಟುಂಬದಲ್ಲಿ ಒಬ್ಬ ಹಿರಿಯರು, ಇಡೀ ಕುಟುಂಬಕ್ಕೆ ಒಬ್ಬ ದೊಡ್ಡ ಮುಖ್ಯಸ್ಥ ಇದ್ದಂತೆ ಅಂತ ಎಲ್ರೂ ಭಾವಿಸ್ತಿದಾರೆ. ಅದಕ್ಕೆ ಅವರು ಅರ್ಹರಾಗಿದಾರೆ ಕೂಡ. ಈವರೆಗೆ ಚಿತ್ರರಂಗದ ಯಾವ ಸಮಸ್ಯೆ ತಗೊಂಡು ಹೋಗಿ ಅಂಬರೀಷ್ ಮನೆಯಲ್ಲಿ ಇಟ್ಟಾಗ ಅದು ಖಂಡಿತವಾಗ್ಲೂ ಇತ್ಯರ್ಥವಾಗಿದೆ. ಸಾಲ್ವ್ ಆಗಿದೆ. ಒಂದು ಕುಟುಂಬದ ಆಗುಹೋಗುಗಳು ಕಷ್ಟ ಇರ್ಬಹುದು, ಸುಖ ಇರ್ಬಹುದು ಅದು ನಾಲ್ಕು ಗೋಡೆಗಳ ಮಧ್ಯೆನೇ ಇದ್ದು ಗೌರವಾನ ಉಳಿಸ್ಕೊಂಡಿದೆ ಅಂದ್ರೆ ಅದು ಅಂಬರೀಷ್‌ರಿಂದ ಮಾತ್ರ ಸಾಧ್ಯವಾಗುತ್ತೆ.