
ಬೆಂಗಳೂರು(ನ.15): ನಿರ್ಮಾಪಕನ ಸಂಬಂಧಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೊಲೆ ಬೆದರಿಕೆ ಆರೋಪದಡಿ ದುನಿಯಾ ವಿಜಿಯನ್ನು ಬಂಧಿಸಲಾಗಿದೆ.
ಈಗಾಗಲೇ ಬಂಧಿಸಲಾಗಿರುವ ವಿಜಿ ವಿರುದ್ಧ ಐಪಿಸಿ 323, 504, 506, 509 ಅಡಿಯಲ್ಲಿ ಎಫ್'ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಆರೋಪಿಗೆ ಠಾಣೆಯಲ್ಲೇ ಜಾಮೀನು ಸಿಗುವ ಸಾಧ್ಯತೆಗಳಿವೆ. ಇದರೊಂದಿಗೆ ನ್ಯಾಯಾಧೀಶರ ಎದುರೂ ದುನಿಯಾ ವಿಜಯ್ರನ್ನು ಹಾಜರುಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಠಾಣೆ ಜಾಮೀನು ಕೊಡಬಹುದಾ ಅಥವಾ ಜಡ್ಜ್ ಹಾಜರುಪಡಿಸಬೇಕಾ ಎಂಬುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟದ್ದು ಹಾಗಾಗಿ, ದುನಿಯಾ ವಿಜಯ್ ಜೈಲಿಗೆ ಹೋಗುವ ಸಾಧ್ಯತೆ ಕಡಿಮೆ
ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಅಣ್ಣ ಶಂಕರ್ಗೌಡ 3 ತಿಂಗಳ ಹಿಂದೆ ಮಾನಸ ಎಂಬುವರನ್ನು ಮದುವೆಯಾಗಿದ್ದರು. ಫೇಸ್ಬುಕ್ನಲ್ಲಿ ಪರಿಚಯವಾಗಿ ಶಂಕರ್ಗೌಡ-ಮಾನಸ ಮದುವೆಯಾಗಿದ್ದರು. ಮದುವೆಯಾದ ದಿನದಿಂದಲೂ ಮಾನಸಳಿಗೆ ಶಂಕರ್ಗೌಡ ಕುಟುಂಬದವರು ಕಿರುಕುಳ ನೀಡುತ್ತಿದ್ದು, ಮನಸಾ ಭೇಟಿಗೆ ತಂದೆ ಜಯರಾಮ್, ತಾಯಿ ಯಶೋಧಮ್ಮಗೆ ಅವಕಾಶ ನೀಡುತ್ತಿರಲಿಲ್ಲ. ಈ ಕುರಿತು ತಂದೆ ಜಯರಾಮ್ ಜತೆ ಮಾನಸಾ ನೋವು ಹಂಚಿಕೊಂಡಿದ್ದಳು.
ಈ ಬಗ್ಗೆ ವಿಚಾರಿಸಲು ಇಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಶಂಕರ್ಗೌಡ ನಿವಾಸಕ್ಕೆ ಜಯರಾಮ್ ತೆರಳಿದ್ದರು. ಸಂಧಾನಕ್ಕಾಗಿ ನಟ ದುನಿಯಾ ವಿಜಯ್ರನ್ನು ಕರೆಸಿಕೊಂಡ ಶಂಕರ್ಗೌಡ ಮಾನಸಾ ತಂದೆ ಜಯರಾಮ್ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಯರಾಮ್ ಮೇಲೆ ಹಲ್ಲೆ ನಡೆಸಿದ್ದ ದುನಿಯಾ ವಿಜಿ ಜಯರಾಮ್ಗೆ ಕಪಾಳ ಮೋಕ್ಷ ಮಾಡಿ, ಎದೆಗೆ ಗುದ್ದಿದ್ದರು.
ಇದರಿಂದ ಅಸ್ವಸ್ಥಗೊಂಡಿದ್ದ ಜಯರಾಮ್ರನ್ನು ಗಾಂಧಿಬಜಾರ್ ಬಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ಬಳಿಕ ಜಯರಾಮ್ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆಸ್ಪತ್ರೆಗೆ ತೆರಳಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಅಸ್ವಸ್ಥ ಜಯರಾಮ್ ಹೇಳಿಕೆ ಪಡೆದಿದ್ದರು.
ಆದರೆ ಮಾಧ್ಯಮಗಳು ಜಯರಾಮ್ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ ಮತ್ತೆ ವಿಜಿ ಶಂಕರ್ಗೌಡ- ಮಾನಸಾ ರಾಜೀ ಸಂಧಾನಕ್ಕೆ ಮುಂದಾಗಿದ್ದು, ಮಾನಸ ದುನಿಯಾ ವಿಜಿ ಯಾವುದೇ ಹಲ್ಲೆ ನಡೆಸಿಲ್ಲ ಎಂದು ಶಂಕರ್ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಆದರೆ, ಜಯರಾಮ್ ಪತ್ನಿ ಯಶೋಧ ಈ ರಾಜಿ ಸಂಧಾನ ತಳ್ಳಿ ಹಾಕಿದ್ದರು. ಹೀಗಾಗಿ ಶಂಕರ್ಗೌಡ ನಿವಾಸಕ್ಕೆ ತೆರಳಿ ದುನಿಯಾ ವಿಜಯ್ ವಿಚಾರಣೆ ನಡೆಸಿದ ಪೊಲೀಸರು ವಿಜಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.