
ಬೆಂಗಳೂರು[ನ.26] ದೂರದ ದೇಶದಲ್ಲಿದ್ದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬರೀಶ್ ಅಂತ್ಯ ಸಂಸ್ಕಾರ ಆಗಮಿಸಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ರಮ್ಯಾ ಮಾತ್ರ ಅಂಕಲ್ ನೋಡಲು ಬರಲೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಂಬರೀಶ್ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಮಂಡ್ಯದ ಮಾಜಿ ಸಂಸದೆ: ಅಂಬರೀಶ್ ಸಹಕಾರ ಇಲ್ಲವಾಗಿದ್ದರೆ ರಮ್ಯಾ ಸಂಸದೆಯಾಗಿ ಹೊರಹೊಮ್ಮಲು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುವ ಸತ್ಯ ಎಲ್ಲರಿಗೂ ಗೊತ್ತು. ಪ್ರಚಾರದ ವೇಳೆ ಅಂಬರೀಶ್ ಸಹಕಾರ ಪಡೆದುಕೊಂಡಿದ್ದರು.
ಮತದಾನಕ್ಕೂ ಬಾರದ ರಮ್ಯಾ: ಮಂಡ್ಯ ತನ್ನ ತವರು ಎಂದು ಹೇಳಿಕೊಳ್ಳುವ ರಮ್ಯಾ ಕಳೆದ ವಿಧಾನಸಭೆ ಚುನಾವಣೆ ಮತ್ತು ಮೊನ್ನೆ ನಡೆದ ಲೋಕಸಭೆ ಚುನಾವಣೆಗೂ ರಮ್ಯಾ ಮತದಾನ ಮಾಡಲು ಬರಲಿಲ್ಲ.
ಲಕ್ಷಾಂತರ ಜನರಿಂದ ದರ್ಶನ: ಅಂಬರೀಶ್ ಅವರ ಅಂತಿಮ ದರ್ಶನವನ್ನು ಗಣ್ಯರು, ರಾಜಕಾರಣಿಗಳು, ಸಿನಿಮಾ ತಂತ್ರಜ್ಞರು ಸೇರಿದಂತೆ ಲಕ್ಷಾಂತರ ಜನ ಪಡೆದುಕೊಂಡರು. ಮಂಡ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ಆದರೆ ರಮ್ಯಾ ಮಾತ್ರ ಯಾವ ದೇಶದಲ್ಲಿದ್ದರೋ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.