ಪ್ರೇಮ ವಿವಾಹಕ್ಕೆ ಜವರಾಯನ ಅಡ್ಡಿ: ವಧು ಸೇರಿ 8 ಮಂದಿ ಸಾವು

Published : May 25, 2017, 10:22 PM ISTUpdated : Apr 11, 2018, 12:56 PM IST
ಪ್ರೇಮ ವಿವಾಹಕ್ಕೆ ಜವರಾಯನ ಅಡ್ಡಿ: ವಧು ಸೇರಿ 8 ಮಂದಿ ಸಾವು

ಸಾರಾಂಶ

ಅವರಿಬ್ಬರೂ ಪರಸ್ಪರ ಪ್ರೀತಿಸಿದ್ದರು. ಹುಡುಗಿ ಮನೆಯಲ್ಲಿ ವಿರೋಧದಿಂದಾಗಿ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದರು. ಶಾಸ್ತ್ರೋಕ್ತವಾಗಿ ವಿವಾಹವಾಗಲು ಧರ್ಮಸ್ಥಳಕ್ಕೆ ಹುಡುಗನ ಕುಟುಂಬದೊಂದಿಗೆ ಟೆಂಪೋದಲ್ಲಿ ತೆರಳುವಾಗ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ವಧು ಸೇರಿದಂತೆ 8 ಮಂದಿ ಸಾವೀಗೀಡಾಗಿದ್ದು, ಮದುಮಗನ ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, 21 ಮಂದಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಅಣ್ಣೆಬೀಳುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಹೊನ್ನಾವರ (ಮೇ.25): ಅವರಿಬ್ಬರೂ ಪರಸ್ಪರ ಪ್ರೀತಿಸಿದ್ದರು. ಹುಡುಗಿ ಮನೆಯಲ್ಲಿ ವಿರೋಧದಿಂದಾಗಿ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದರು. ಶಾಸ್ತ್ರೋಕ್ತವಾಗಿ ವಿವಾಹವಾಗಲು ಧರ್ಮಸ್ಥಳಕ್ಕೆ ಹುಡುಗನ ಕುಟುಂಬದೊಂದಿಗೆ ಟೆಂಪೋದಲ್ಲಿ ತೆರಳುವಾಗ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ವಧು ಸೇರಿದಂತೆ 8 ಮಂದಿ ಸಾವೀಗೀಡಾಗಿದ್ದು, ಮದುಮಗನ ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, 21 ಮಂದಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ
ಹೊನ್ನಾವರ ತಾಲೂಕಿನ ಮಂಕಿ ಅಣ್ಣೆಬೀಳುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
 
ದಾವಣಗೆರೆಯ ನಿವಾಸಿ, ವಧು, ದಿವ್ಯಾ ದಾಮೋದರ ಕುರ್ಡೇಕರ(28), ಸೊರಬ ತಾಲೂಕಿನ ಸಿಗ್ಗಾದ ಪಾಲಾಕ್ಷಿ ನಾಗರಾಜ ಶೇಟ್(42), ಬೇಬಿ ಸುನೀಲ ಶೇಟ್(38), ಶಿರಸಿ ದಾಸನಕೊಪ್ಪದ ಸುಬ್ರಹ್ಮಣ್ಯ ಸುನೀಲ ಶೇಟ್(25), ಮುಂಡಗೋಡ ತಾಲೂಕಿನ ಹುನಗುಂದದ ಪೂಜಾ ಶೇಟ್(24), ಸೊರಬ ಸಿಗ್ಗಾದ ರುಕ್ಮಿಣಮ್ಮಾ ಕೃಷ್ಣಪ್ಪ ಶೇಟ್(65), ಟೆಂಪೋ ಚಾಲಕ ಧಾರವಾಡದ ನರೇಂದ್ರದ ನಾಗಪ್ಪ ಬಸಪ್ಪ ಗಾಣಿಗೇರ(44) ಹಾಗೂ ಖಾಸಗಿ ಬಸ್ ಚಾಲಕ ಹಾವೇರಿ ಬಂಕಾಪುರದ ಉಮೇಶ ವಾಲ್ಮೀಕಿ (35) ಮೃತಪಟ್ಟವರು.
ವಿವಾಹಕ್ಕಾಗಿ ಧರ್ಮಸ್ಥಳಕ್ಕೆ ಟೆಂಪೋ ಮುರ್ಡೇಶ್ವರ ಬಳಿಯ ಅಣ್ಣೇಬೀಳುವಿನ ಬಳಿ ಬೆಳಗಿನ ಜಾವ ೨ ಸಮಯದಲ್ಲಿ ಸಾಗುತ್ತಿತ್ತು. ಮಂಗಳೂರಿನಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆಯಿತು. ಟೆಂಪೋ ಮತ್ತು ಬಸ್ ಚಾಲಕರು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಕೆಲವರು ಮಾರ್ಗ ಮಧ್ಯೆ, ಇನ್ನು ಹಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮದುಮಗ ದಾಸನಕೊಪ್ಪ ನಿವಾಸಿ ಹರೀಶ ನಾಗರಾಜ ಕುರ್ಡೇಕರ ಸೇರಿದಂತೆ ೨೨ ಮಂದಿ ಗಾಯಗೊಂಡಿದ್ದು, ಅವರನ್ನು ಮುರ್ಡೇಶ್ವರ, ಭಟ್ಕಳ, ಕುಂದಾಪುರ, ಮಂಗಳೂರು, ಮಣಿಪಾಲ ಮತ್ತಿತರ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಪ್ರೀತಿ ಸಾವಿನಲ್ಲಿ ಅಂತ್ಯ
ಶಿರಸಿ ತಾಲೂಕಿನ ದಾಸನಕೊಪ್ಪ ನಿವಾಸಿ ಹರೀಶ ನಾಗರಾಜ ಕುರ್ಡೇಕರ ಹಾಗೂ ದಾವಣಗೆರೆಯ ದಿವ್ಯಾ ದಾಮೋದರ ಕುರ್ಡೇಕರ ಪ್ರೀತಿಸುತ್ತಿದ್ದರು. ಇದಕ್ಕೆ ದಿವ್ಯಾ ಕುಟುಂಬಸ್ಥರು ಒಪ್ಪದ್ದರಿಂದ ೨ ತಿಂಗಳ ಹಿಂದೆ ಇವರು ದಾವಣಗೆರೆ ನೋಂದಣಿ ಕಚೇರಿಯಲ್ಲಿ ರಜಿಸ್ಟರ್ ಮದುವೆಯಾಗಿದ್ದರು. ಶುಕ್ರವಾರ ಧರ್ಮಸ್ಥಳದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಲು ನಿಶ್ಚಯಿಸಿ ಹರೀಶ ಕುಟುಂಬಸ್ಥರೊಂದಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.
ದಿವ್ಯಾ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಹರೀಶ ಕುರ್ಡೇಕರ ಹಾಗೂ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮದುವೆಗೆ ತೆರಳುತ್ತಿದ್ದರು. ದಿವ್ಯಾ ಮೃತಪಟ್ಟಿದ್ದು, ಮದುಮಗ ಹರೀಶನ ಕಾಲುಗಳಿಗೆ ತೀವ್ರ ಪೆಟ್ಟುಬಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ