ಡಿಜಿಲಾಕರ್ ಅಧಿಕೃತಗೊಳಿಸಿದ ಕೇಂದ್ರ! ಡಿಎಲ್, ಆರ್‌ಸಿ ಮಾನ್ಯತೆಗೆ ಸೂಚನೆ! ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ! ಮೂಲ ದಾಖಲೆ ವಶಪಡಿಸಿಕೊಳ್ಳಲು ಇಲ್ಲ ಅವಕಾಶ
ನವದೆಹಲಿ(ಆ.10): ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆಕ್ಟ್) ನಿಯಮಗಳಂತೆ ಟ್ರಾಫಿಕ್ ಪೊಲೀಸರು ಮತ್ತು ರಾಜ್ಯ ಸರ್ಕಾರಗಳು, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳನ್ನು ಡಿಜಿಲಾಕರ್ ಮೂಲಕ ಪರಿಶೀಲನೆಗೆ ಮುಂದಾಗಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿದೆ.
ಡಿಜಿಲಾಕರ್ ಅಥವಾ ಎಂಪರಿವಾಹನ್ ಪ್ ಗಳ ಮೂಲಕ ದೃಢೀಕರಿಸಲಾದ ಎಲೆಕ್ಟ್ರಾನಿಕ್ ಸ್ವರೂಪದ ದಾಖಲೆಗಳನ್ನು ಅಧಿಕೃತವೆಂದೇ ಪರಿಗಣಿಸತಕ್ಕದ್ದು ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.
undefined
ಸಂಚಾರ ನಿಯಮಗಳ ಉಲ್ಲಂಘನೆ ಸಂದರ್ಭದಲ್ಲಿ ಪೊಲೀಸರು ತಮ್ಮ ಕೈಲಿರುವ ಎಲೆಕ್ಟ್ರಾನಿಕ್ ಸಾಧನ ಅಥವಾ ಮೊಬೈಲ್ ಫೋನ್ ಮೂಲಕವೇ ಚಾಲಕರು ಮತ್ತು ವಾಹನಗಳ ಎಲೆಕ್ಟ್ರಾನಿಕ್ ದಾಖಲೆಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೇಂದ್ರೀಕೃತ ಡೇಟಾಬೇಸ್ ಗೆ ಲಾಗಿನ್ ಆಗಬಹುದು.
ಹೀಗಾಗಿ ಮೂಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರದ ಸುತ್ತೋಲೆ ಸ್ಪಷ್ಟಪಡಿಸಿದೆ. ಮಿತಿ ಮೀರಿದ ವೇಗ, ಸಿಗ್ನಲ್ ಜಂಪ್ ಅಥವಾ ಚಾಲನೆ ವೇಳೆ ಫೋನ್ ಬಳಕೆಯಂತಹ ಹಲವು ಪ್ರಕರಣಗಳಲ್ಲಿ ಸಂಚಾರ ಪೊಲೀಸರು ಚಾಲಕರು ಮತ್ತು ವಾಹನಗಳ ಮೂಲ ದಾಖಲೆಗಳನ್ನೇ ಮುಟ್ಟುಗೋಲು ಹಾಕಿಕೊಂಡು ನಂತರ ಕಳೆದುಹಾಕಿದ ಸಾಕಷ್ಟು ನಿದರ್ಶನಗಳಿವೆ.
ಮೂಲ ದಾಖಲೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡರೆ ನಂತರ ಸಾರಿಗೆ ಇಲಾಖೆಗಳು ಅವುಗಳನ್ನು ಪತ್ತೆ ಮಾಡುವುದು ಕಷ್ಟವಾಗಿತ್ತದೆ. ಇಂತಹ ಸನ್ನಿವೇಶಗಳಲ್ಲಿ ಜನರು ಹೊಸ ದಾಖಲೆಗಳನ್ನು ಪಡೆಯುವುದೂ ದುಸ್ತರವಾಗುತ್ತದೆ.
ಈ ಕಾರಣಕ್ಕಾಗಿ ಡಿಜಿಲಾಕರ್ ಮತ್ತು ಎಂಪರಿವಾಹನ್ ಪ್ ಗಳನ್ನು ಅಧಿಕೃತ ಎಂದು ಪರಿಗಣಿಸಲು ಟ್ರಾಫಿಕ್ ಪೊಲೀಸರಿಗೆ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.