ರಾಜ್ಯದ ಬೇರೆ ಬೇರೆ ಕಡೆ ಏಕಕಾಲಕ್ಕೆ ಎಸಿಬಿ ರೈಡ್!

Published : Mar 20, 2018, 09:13 AM ISTUpdated : Apr 11, 2018, 12:54 PM IST
ರಾಜ್ಯದ ಬೇರೆ ಬೇರೆ ಕಡೆ ಏಕಕಾಲಕ್ಕೆ ಎಸಿಬಿ ರೈಡ್!

ಸಾರಾಂಶ

ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ. 

ಬೆಂಗಳೂರು (ಮಾ. 20): ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ. 

ಧಾರವಾಡ

ಧಾರವಾಡದ ಶ್ರೀಪತಿ ದೊಡ್ಡಲಿಂಗಣ್ಣ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ  500, 1000 ರೂ  ನೋಟುಗಳು  ಪತ್ತೆಯಾಗಿವೆ.  ಈ ಹಿಂದೆ ದೊಡ್ಡಲಿಂಗಣ್ಣನವರ ಅಕ್ರಮಗಳ ಕುರಿತು ಸುವರ್ಣ ನ್ಯೂಸ್ ಸರಣಿ ಸುದ್ದಿ ಮಾಡಿತ್ತು.

ದಾವಣಗೆರೆ 
 ದಾವಣಗೆರೆ  ದೂಡಾ  ಜಂಟಿ ನಿರ್ದೇಶಕ  ಗೋಪಾಲಕೃಷ್ಣ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನಿಟ್ಟುವಳ್ಳಿ ಸಿದ್ದರಾಮೇಶ್ವರ ಬಡಾವಣೆ ಮನೆ , ದೂಡಾ ಕಚೇರಿ , ದಾವಣಗೆರೆ ಮಹಾನಗರಪಾಲಿಕೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ.  ಮೂರು ಅಂತಸ್ತಿನ ಮನೆ, ದಾವಣಗೆರೆ ಯಲ್ಲಿ ನಿವೇಶನ ,ಕೋಲ್ಕುಂಟೆ 8 ಎಕರೆ  ಜಮೀನು ,ಒಂದು ಕಾರು 1 ಬೈಕ್ ದಾಖಲೆ ಪತ್ರಗಳು ಲಭ್ಯವಾಗಿದೆ.  
 ದಾವಣಗೆರೆ ಎಸಿಬಿ ಎಸ್ಪಿ ವಂಶೀಕೃಷ್ಣ ,ದಾವಣಗೆರೆ ವಾಸುದೇವ ರಾಮ್ ,ಮಂಜುನಾಥ ಪಂಡಿತ್ ನೇತೃತ್ವದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. 

ಬೆಳಗಾವಿ 
ಬೆಳಗಾವಿ ಮಹಾನಗರ ಪಾಲಿಕೆ ಎಇಇ. ಕಿರಣ ಸುಬ್ಬರಾವ್ ಭಟ್ ಮನೆ ಮೇಲೆ  ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ. 
ಬೆಳಗಾವಿಯಲ್ಲಿ ಇರುವ ಮೂರು ಮನೆಗಳ ಮೇಲೆ ದಾಳಿ ಮಾಡಲಾಗಿದೆ.  ಟಿಳಕವಾಡಿ, ರಾಣಿ ಚೆನ್ನಮ್ಮ ನಗರ, ಹಿಂದವಾಡಿಯಲ್ಲಿ ಇರುವ ಮನೆಗಳ ಮೇಲೆಯೂ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದಿಸಿದ ಹಿನ್ನೆಲೆ ಎಸಿಬಿ ದಾಳಿ ನಡೆಸಲಾಗಿದೆ. 

ಕಲಬುರಗಿ 
ಹುಮ್ನಾಬಾದ್ ತಾಲೂಕಿನ ಕಾರಾಂಜಾ ನೀರಾವರಿ ಯೋಜನೆಯ ಎಇಇ ವಿಜಯ್ ಕುಮಾರ್ ಅವರ ಕಲಬುರಗಿ ಮನೆ  ಮೇಲೆ ಬೀದರ್ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 
ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮುಚಳಂಬಾ ಗ್ರಾಮ ಮತ್ತು ಕಲಬುರಗಿ ನಗರದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು  ಪರಿಶೀಲನೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ವಿರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

ತುಮಕೂರು
ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಮನೆ ಕಚೇರಿ ಮೇಲೆ ದಾಳಿ ನಡೆದಿದೆ.  ಚಿತ್ರದುರ್ಗದ ಮನೆ ಹಾಗೂ ತುಮಕೂರಿನ ಎಸಿ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 
ಚಿತ್ರದುರ್ಗ ಎಸಿಬಿ ಡಿವೈಎಸ್ಪಿ ಜಿ.ಮಂಜುನಾಥ, ಶಿವಮೊಗ್ಗ ಡಿವೈಎಸ್ಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು  ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!