
ಚಿಕ್ಕಮಗಳೂರು[ಡಿ.27] ಆತ ದೇವರನಾಡು ಕೇರಳದಿಂದ ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ. ಆದ್ರೆ, ಆತನ ಬೈಕ್ ಶೃಂಗೇರಿ ಶಾರದಾ ಸನ್ನಿಧಿಯ ತುಂಗಾ ನದಿ ತಟದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಆತನ ಹುಡುಕಾಟಕ್ಕೆ ಎರಡು ರಾಜ್ಯದ ಪೊಲೀಸರು ಹರಸಾಹಸ ಪಟ್ಟಿದ್ದರು. ಆದರೆ ಯುವಕ ಮಾತ್ರ ಎರಡು ರಾಜ್ಯದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತನ್ನ ಪ್ರೇಯಸಿಯ ಜೊತೆ ದೇಶ ಸುತ್ತಲು ಹೋಗಿ ಈಗ ಸಿಕ್ಕಿಬಿದ್ದಿದ್ದಾನೆ. ಹಾಗಾದ್ರೆ, ಏನು ಈ ಯುವಕನ ಕತೆ ಹಾಗೂ ನಾಪತ್ತೆಯ ನಾಟಕದ ಹಿಂದಿನ ಸತ್ಯ ಏನು ಅಂತೀರಾ?
ಈತನ ಹೆಸರು ಸಂದೀಪ್. ಕೇರಳ ಮೂಲದ ಕ್ಯಾಲಿಕಟ್ ನಿವಾಸಿ. ಈತ ಕೇರಳದ ಜಾಹೀರಾತು ಕಂಪನಿವೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಸಂದೀಪ್ ನವೆಂಬರ್ 25 ರಂದು ಹೆಂಡತಿ ಹಾಗೂ ಅಪ್ಪ, ಅಮ್ಮ ನಿಗೆ ಹೇಳಿ ಚಿಕ್ಕಮಗಳೂರಿಗೆ ಪ್ರವಾಸ ಹೋಗೋದಾಗಿ ಕೇರಳದಿಂದ ಬೈಕ್ ನಲ್ಲಿ ಹೊರಟಿದ್ದ. ನವೆಂಬರ್ 26 ರ ಸಂಜೆ ಪೋನ್ ಗೆ ಸಿಗದ ಹಿನ್ನೆಲೆ ಕೇರಳ ಪೊಲೀಸ್ ಠಾಣೆಗೆ ಕಾಣೆಯಾಗಿರೋ ಬಗ್ಗೆ ಸಂದೀಪ್ ಮನೆಯವರು ದೂರು ನೀಡಿದ್ದರು.
8 ಕೊಲೆ ಪ್ರಕರಣ ಪತ್ತೆ ಮಾಡಿದ ಚಿಕ್ಕಮಗಳೂರಿನ ಪತ್ತೆದಾರಿ ನಮ್ಮೊಂದಿಗಿಲ್ಲ
ಇಂಜಿನಿಯರ್ ಕಾಣೆಯಾಗಿರೋ ಬಗ್ಗೆ ಕೇರಳ ಪೊಲೀಸರು ಚಿಕ್ಕಮಗಳೂರು ಪೊಲೀಸರನ್ನ ಸಂಪರ್ಕ ಮಾಡಿದ್ದರು. ವಿಷಯ ತಿಳಿದ ಚಿಕ್ಕಮಗಳೂರು ಪೊಲೀಸರು ಇಂಜಿನಿಯರ್ ಗಾಗಿ ಹುಡುಗಾಟ ನಡೆಸುತ್ತಿದ್ರು. ಈ ವೇಳೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಾಗಲಾಪುರದಲ್ಲಿ ತುಂಗಾ ನದಿಯ ತಡದಲ್ಲಿ ಸಂದೀಪ್ ಬೈಕ್ ಕೆ.ಎಲ್ -18, ವಿ 911 ಸಂಖ್ಯೆಯ ಬೈಕ್ ಪತ್ತೆಯಾಗಿತ್ತು.
ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ನಿಲ್ಲಿಸಿ, ನದಿಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿರೋ ಶಂಕೆ ವ್ಯಕ್ತವಾಗಿರೋದ್ರಿಂದ ಮೃತದೇಹಕ್ಕಾಗಿ ಒಂದು ತಿಂಗಳ ಕಾಲ ಕೇರಳ ಹಾಗೂ ಹರಿಹರಪುರ ಪೊಲೀಸರು ನುರಿತ ಈಜುಪಟುಗಳ ಜೊತೆ ತೀವ್ರ ಶೋಧ ಕಾರ್ಯ ನಡೆಸಿದ್ರು. ಆದ್ರೆ ಸಂದೀಪ್ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಸಂದೀಪ್ ಪತ್ತೆಯಾಗದೆ ಹಿನ್ನೆಲೆ ಕೇರಳ ಸರ್ಕಾರ ಈ ಪ್ರಕರಣವನ್ನ ಕಳೆದ ವಾರ ಕೇರಳದ ಎಸ್ ಐ ಟಿ ಗೆ ನೀಡಿತ್ತು. ಸಂದೀಪ್ ಗಾಗಿ ಹುಡುಗಾಟ ನಡೆಸುತ್ತಿದ್ದ ಎಸ್ ಐಟಿ ಪೊಲೀಸರಿಗೆ ಇಂದು ಮುಂಬೈ ಲಾಡ್ಜ್ ವೊಂದರಲ್ಲಿ ಸಂದೀಪ್ ಪತ್ತೆಯಾಗಿದ್ದಾನೆ. ಸಂದೀಪ್ ಜೊತೆ ಓರ್ವ ಯುವತಿ ನೋಡಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಹೌದು, ಕಳೆದ ಒಂದು ವಾರದಿಂದ ಎಸ್ ಐ ಟಿ ಪೊಲೀಸರು ಸಂದೀಪ್ ಗಾಗಿ ತೀವ್ರ ಶೋಧ ನಡೆಸುತ್ತಿದ್ರು, ಸಂದೀಪ್ ಕಾಲ್ ಡಿಟೇಲ್ಸ್ ಕಲೆ ಹಾಕಿ, ಪಿನ್ ಟು ಪಿನ್ ಮಾಹಿತಿ ಕಲೆ ಹಾಕ್ತಿದ್ರು. ಸಂದೀಪ್ ಮದುವೆಯಾಗಿದ್ರು ಯಾವುದಾದ್ರು ಯುವತಿ ಜೊತೆ ಲವ್ ಅಫೈರ್ ಹಿಟ್ಟುಕೊಂಡಿದ್ನ, ಪ್ಯಾಮಿಲಿ ಸಮಸ್ಯೆನಾ, ಕೆಲಸದ ಒತ್ತಡನ ಹೀಗೆ ಹತ್ತು ಹಲವು ಮಾರ್ಗದಲ್ಲಿ ಎಸ್ ಐ ಟಿ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ರು. ಆಗ ಸಿಕ್ಕಿದ್ದೇ ಕೇರಳದ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಸಂದೀಪ್ ಕಾಣೆಯಾಗಿರೋ ದಿನ ಮತ್ತೊಂದು ಯುವತಿ ಮಿಸಿಂಗ್ ಆಗಿರೋ ಪ್ರಕರಣ ದಾಖಲಾಗಿರೋದು. ಈ ಎರಡು ಪ್ರಕರಣ ತಾಳೆ ಹಾಕಿದಾಗ ಎಸ್ ಐ ಟಿ ಪೊಲೀಸರಿಗೆ ಮುಂಬೈನ ಲಾಡ್ಜ್ ವೊಂದರಲ್ಲಿ ಈ ಇಬ್ಬರು ಪತ್ತೆಯಾಗಿದ್ದಾರೆ. ಸಂದೀಪ್ ತನ್ನ ಪ್ರೇಯಸಿ ಜೊತೆ ಪತ್ತೆಯಾಗಿದ್ದಾನೆ. ಸಂದೀಪ್ ಪ್ರೇಯಸಿ ಜೊತೆ ಸಿಕ್ಕಿರೋದನ್ನ ಕೇಳಿದ ಸಂದೀಪ್ ಪತ್ನಿ ಆಘಾತಕ್ಕೆ ಒಳಗಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.