ಸರಿಯಾದ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿಗೆ ಆದಾಯ ತೆರಿಗೆ ಕಚೇರಿ ಅಧಿಕಾರಿಗಳು 56 ಕೋಟಿ ದಂಡ ವಿಧಿಸಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಹಲವು ನೋಟಿಸ್ ನೀಡಿದ್ದರೂ ಸಿಂಘ್ವಿ ಇವುಗಳನ್ನು ಸ್ವಿಕರಿಸಿರಲಿಲ್ಲ.
ನವದೆಹಲಿ(ನ.15): ಸರಿಯಾದ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿಗೆ ಆದಾಯ ತೆರಿಗೆ ಕಚೇರಿ ಅಧಿಕಾರಿಗಳು 56 ಕೋಟಿ ದಂಡ ವಿಧಿಸಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಹಲವು ನೋಟಿಸ್ ನೀಡಿದ್ದರೂ ಸಿಂಘ್ವಿ ಇವುಗಳನ್ನು ಸ್ವಿಕರಿಸಿರಲಿಲ್ಲ.
ಅಭಿಷೇಕ್ ಮನು ಸಿಂಘ್ವಿ ವಿರುದ್ಧದ ಆರೋಪಗಳು
ಅಭಿಷೇಕ್ ಮನು ಸಿಂಘ್ವಿ ವೃತ್ತಿಯಲ್ಲಿ ವಕೀಲ, ದೆಹಲಿಯಲ್ಲಿ ಕಚೇರಿ ಇದೆ. 2010-11ರಿಂದ 3 ವರ್ಷಗಳ ದಾಖಲೆ ಪತ್ರಗಳಲ್ಲಿ ಭಾರಿ ವ್ಯತ್ಯಾಸವಿದೆ. ಸಿಂಘ್ವಿಯವರು 5 ಕೋಟಿ ಮೊತ್ತದ ಲ್ಯಾಪ್ಟಾಪ್ ಖರೀದಿಸಿ 1.5 ಕೋಟಿಗೆ ಬಿಲ್ ಸಲ್ಲಿಸಿದ್ದಾರೆ. 40 ಸಾವಿರ ರೂ. ಮೌಲ್ಯದ ಲ್ಯಾಪ್'ಟಾಪ್ಗಳಿಗೆ 1250 ರೂ. ಬಿಲ್ ತೋರಿಸಿದ್ದಾರೆ.
ಮಾರ್ಚ್ 31, ವರ್ಷದ ಅಡಿಟ್ ಕೊನೆಯಾಗುವ ಅಧಿಕೃತ ದಿನವಾಗಿದ್ದು, ಸಲ್ಲಿಸಿದ್ದ ಬಿಲ್ಗಳ ಮೊತ್ತಕ್ಕೂ, ತೋರಿಸಿದ ವೆಚ್ಚಗಳಿಗೂ ತಾಳೆಯಾಗುತ್ತಿರಲಿಲ್ಲ. ಹೀಗಾಗಿ ಈ ಬಗ್ಗೆ ಹಲವು ಬಾರಿ ನೀಡಿದ ನೋಟಿಸ್ಗಳನ್ನು ಸಿಂಘ್ವಿ ಸ್ವೀಕರಿಸಿರಲಿಲ್ಲ.