ಅಭಿನಂದನ್‌ ಮೀಸೆ, ಹೇರ್‌ಸ್ಟೈಲ್‌ ವೈರಲ್‌

Published : Mar 02, 2019, 08:41 AM IST
ಅಭಿನಂದನ್‌ ಮೀಸೆ, ಹೇರ್‌ಸ್ಟೈಲ್‌ ವೈರಲ್‌

ಸಾರಾಂಶ

ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಮತ್ತೊಂದು ಎಫ್‌-16 ನಾಶ ಮಾಡಲು ಹೋಗಿ ಪಾಕ್‌ ವಶವಾದ ಪೈಲಟ್‌ ಅಭಿನಂದನ್ ಮೀಸೆ ಹಾಗೂ ಹೇರ್‌ಸ್ಟೈಲ್‌ ಕೂಡ ಫುಲ್ ವೈರಲ್ ಆಗುತ್ತಿದೆ.

ಚೆನ್ನೈ[ಮಾ.02]: ದೇಶದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಮತ್ತೊಂದು ಎಫ್‌-16 ನಾಶ ಮಾಡಲು ಹೋಗಿ ಪಾಕ್‌ ವಶವಾದ ಪೈಲಟ್‌ ‘ವಿಂಗ್‌ ಕಮಾಂಡರ್‌’ ಅಭಿನಂದನ್‌ ವರ್ತಮಾನ್‌ ಅವರು ಈಗ ದೇಶ- ವಿದೇಶಗಳಾದ್ಯಂತ ಪ್ರಸಿದ್ಧರಾಗಿದ್ದಾರೆ.

ಅಭಿನಂದನ್‌ ಅವರಷ್ಟೇ ಅಲ್ಲ, ಇದೀಗ ಅವರ ಮೀಸೆ ಹಾಗೂ ಹೇರ್‌ಸ್ಟೈಲ್‌ ಕೂಡ ಜನಪ್ರಿಯವಾಗಿದ್ದು, ಆನ್‌ಲೈನ್‌ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಸಾಕಷ್ಟು ಮಂದಿ ಅಭಿನಂದನ್‌ ಅವರ ಮೀಸೆ ಹಾಗೂ ತಲೆಕೂದಲಿನ ರೇಖಾಚಿತ್ರವನ್ನಷ್ಟೇ ವಾಟ್ಸ್‌ಆ್ಯಪ್‌ನಲ್ಲಿ ತಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಂಡಿದ್ದಾರೆ. ಸ್ಟೇಟಸ್‌ಗೂ ಹಾಕಿಕೊಂಡಿದ್ದಾರೆ. ಫೇಸ್‌ಬುಕ್‌ ಹಾಗೂ ಟ್ವೀಟರ್‌ನಲ್ಲೂ ಶೇರ್‌ ಮಾಡಿ ವೀರ ಪೈಲಟ್‌ ಗುಣಗಾನ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: Asian Games 2026 - 17 ಪದಕ ಗೆದ್ದರೂ 15ನೇ ಸ್ಥಾನಕ್ಕೆ ಕುಸಿದ ಭಾರತ..! ಶೂಟಿಂಗ್‌ನಲ್ಲಿ 5ನೇ ದಿನವೂ ಸಿಗಲಿಲ್ಲ ಬಂಗಾರ!
Karnataka News Live: ಕರ್ನಾಟಕ ಬರ ಪರಿಹಾರ: ರೈತರಿಗೆ ₹2,500 ಸಬ್ಸಿಡಿ ಮತ್ತು ಸಾಲ ಮರುಪಾವತಿಗೆ 1 ವರ್ಷ ತಡೆ