'ಅಬ್ ಕಿ ಬಾರ್ ಭಾಜಪಾ ಸರ್ಕಾರ್; ಬಿಎಸ್ವೈ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ'

By Suvarna Web DeskFirst Published Aug 12, 2017, 8:24 PM IST
Highlights

ರಾಷ್ಟ್ರ ರಾಜಕಾರಣದಲ್ಲಿ ಬಲು ಅಪರೂಪದ ಜೋಡಿ ಎಂದರೆ ಮೋದಿ ಮತ್ತು ಷಾ ಜೋಡಿ ಎನ್ನಬಹುದು. ಇಬ್ಬರಲ್ಲಿ ಒಬ್ಬರು ಕರ್ನಾಟಕಕ್ಕೆ ಬರ್ತಾರೆ ಅಂದ್ರೆ ಸಾಕು ನಿರೀಕ್ಷೆಗಳ ಮಹಾಪೂರವೇ ಹರಿದು ಬರುತ್ತೆ. ಇದೀಗ ಅಮಿತ್ ಷಾ ರಾಜ್ಯಕ್ಕೆ ಕಾಲಿಟ್ಟಾಗಿದೆ. ಅದರಿಂದ ರಾಜ್ಯದ ಬಿಜೆಪಿ ಮುಖಂಡರಲ್ಲಿ ಏನೇನೋ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಬೆಂಗಳೂರು (ಆ.12):  ರಾಷ್ಟ್ರ ರಾಜಕಾರಣದಲ್ಲಿ ಬಲು ಅಪರೂಪದ ಜೋಡಿ ಎಂದರೆ ಮೋದಿ ಮತ್ತು ಷಾ ಜೋಡಿ ಎನ್ನಬಹುದು. ಇಬ್ಬರಲ್ಲಿ ಒಬ್ಬರು ಕರ್ನಾಟಕಕ್ಕೆ ಬರ್ತಾರೆ ಅಂದ್ರೆ ಸಾಕು ನಿರೀಕ್ಷೆಗಳ ಮಹಾಪೂರವೇ ಹರಿದು ಬರುತ್ತೆ. ಇದೀಗ ಅಮಿತ್ ಷಾ ರಾಜ್ಯಕ್ಕೆ ಕಾಲಿಟ್ಟಾಗಿದೆ. ಅದರಿಂದ ರಾಜ್ಯದ ಬಿಜೆಪಿ ಮುಖಂಡರಲ್ಲಿ ಏನೇನೋ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ರಾಷ್ಟ್ರ ರಾಜಕಾರಣದಲ್ಲಿ ಮೋದಿ ಮತ್ತು ಶಾ ಕ್ಲಿಕ್ ಆದ ಸಕ್ಸಸ್ ಜೋಡಿ

ರಾಷ್ಟ್ರ ರಾಜಕಾರಣದ ಧ್ರುವತಾರೆಗಳೆಂದರೆ ಅದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ. ಇವರು ರಾಜಕೀಯವಾಗಿ ಬೆಳೆದ ಪರಿ ಅತ್ಯದ್ಭುತ.  ಇಂದು ಭಾರತೀಯ ಜನತಾ ಪಕ್ಷ ಈ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ಅದಕ್ಕೆ ಕಾರಣ ಈ ಜೋಡಿ. ಅದನ್ನು ದೇಶವೇ ಒಪ್ಪಿಕೊಂಡಿದೆ. ಅಷ್ಟರಮಟ್ಟಿಗೆ ಈ ಜೋಡಿ ವರ್ಕೌಟ್ ಆಗಿದೆ.

ಉಭಯ ಮುಖಂಡರ ಮೇಲಿದೆ ದೇಶದ ನಿರೀಕ್ಷೆಯ ಮೂಟೆ

ದೇಶದ ಯುವ ಜನತೆಯ ಆಶಾ ಕಿರಣವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೀ ಅಮಿತ್ ಶಾ ಹೊರಹೊಮ್ಮಿದ್ದಾರೆ.. ಇವರ ಆಡಳಿತದಲ್ಲಿ ರಾಷ್ಟ್ರದ ಜನತೆಗೂ ವಿಶ್ವಾಸ ಬಂದಿದೆ. ಅಷ್ಟರಮಟ್ಟಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಮೋದಿ. ಒಂದು ರಾಜ್ಯಕ್ಕೆ ಈ ಜೋಡಿ ಕಾಲಿಡುತ್ತಿದೆ ಎಂದರೆ ಸಾಕು ಅಲ್ಲಿನ ಬಿಜೆಪಿ ಮುಖಂಡರಲ್ಲಿ ಹೊಸ ಹುರುಪು ಮೂಡುತ್ತದೆ. ಹಾಗೆನೇ ವಿಪಕ್ಷಗಳ ಮುಖಂಡರಲ್ಲಿ ಆತಂಕದ ಛಾಯೆಯೂ ಮೂಡುತ್ತದೆ.

ಇಂದಿನಿಂದ ಮೂರು ದಿನಗಳ ಕಾಲ ಅಮಿತ್ ಶಾ ಕರ್ನಾಟಕದಲ್ಲಿ ಇರಲಿದ್ದಾರೆ.  ರಾಜ್ಯ ಬಿಜೆಪಿ ಘಟಕ ಹೊಸ ಹುರುಪಿನೊಂದಿಗೆ ಶಾರನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ರಾಜ್ಯ ನಾಯಕರ ಅದ್ದೂರಿ ಸ್ವಾಗತದಿಂದ ಖುಷ್ ಆಗಿದ್ದಾರೆ ಅಮಿತ್ ಶಾ!

ಅಬ್ ಕಿ ಬಾರ್ ಭಾಜಪಾ ಸರ್ಕಾರ ಅಂತಾ ಗುಡುಗಿದ್ದಾರೆ ಅಮಿತ್ ಷಾ

ಬೆಂಗಳೂರಿಗೆ ಕಾಲಿಟ್ಟವರೇ ಅಮಿತ್ ಶಾ ಪ್ರತಿಪಕ್ಷಗಳಿಗೆ ಎಚ್ಚರಿಕೆ ಗಂಟೆಯನ್ನು ನೀಡಿದ್ದರೆ, ಬಿಜೆಪಿ ಕಾರ್ತಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಬ್ ಕಿ ಬಾರ್ ಭಾಜಪಾ ಸರ್ಕಾರ್ ಅನ್ನೋ ಘೋಷಣೆ ಮೊಳಗಿಸಿದ್ದಾರೆ.

ಅಮಿತ್ ಷಾ ಅಥವಾ ನರೇಂದ್ರ ಮೋದಿ ರಾಜ್ಯ ಬರ್ತಾರೆಂದರೆ ರಾಜ್ಯ ಬಿಜೆಪಿ ನಾಯಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನ ಮೂಡಿಸಿರುತ್ತೆ. ಇದೀಗ ಅದ್ರಲ್ಲೂ ಚುನಾವಣೆ ಹೊಸ್ತಿಲಲ್ಲಿ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಈ ಜೋಡಿ ಕಾಲಿಟ್ಟಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಅನ್ನೋ ಮಾತಿದೆ. ಜೊತೆಗೆ ಅದು ಸಾಕಷ್ಟು ಕಡೆ ಪ್ರೂವ್ ಆಗಿದೆ. ಕರ್ನಾಟಕದಲ್ಲೂ ಅದೇ ಆಗಲಿದೆ ಅನ್ನೋದು ಇಲ್ಲಿನ ಬಿಜೆಪಿ ಮುಖಂಡರ ಭಾವನೆ

ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸರ್ಕಾರ ರಚನೆ ಮಾಡಲಿದೆ ಅಂತಾ ಅಮಿತ್ ಷಾ ಮತ್ತೇ ಭವಿಷ್ಯ ನುಡಿದಿದ್ದಾರೆ.  ತಾವು ಆಡಿದ ಮಾತಿನಿಂತೆ ನಡೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸವನ್ನ ಈಗಾಗಲೇ ಶಾ ಮೂಡಿಸಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋ ಅಧಮ್ಯ ವಿಶ್ವಾಸ ರಾಜ್ಯ ಬಿಜೆಪಿ ಕಾರ್ಯಕರ್ತರದ್ದು.

 

click me!