
ಪ್ರತಿ ಹುಡುಗಿಗೆ ತಾನು ಕೈ ಹಿಡಿಯುವವನು ಹ್ಯಾಂಡ್ಸಮ್ ಆಗಿರಬೇಕು, ಕೈತುಂಬಾ ಸಂಬಳ ಇರುವವನಾಗಿರಬೇಕು, ಒಳ್ಳೆ ಹುದ್ದೆಯಲ್ಲಿರಬೇಕು ಹಾಗೆ ಹೀಗೆ ಅಂತ ಏನೆಲ್ಲಾ ಕನಸುಗಳಿರುತ್ತದೆ. ಆ ಎಲ್ಲಾ ಗುಣಗಳು ಒಂದೇ ವ್ಯಕ್ತಿಯಲ್ಲಿದ್ದರೆ ಯಾವ ಹುಡುಗಿ ತಾನೇ ಬೇಡ ಎನ್ನಲು ಸಾಧ್ಯ! ಈ ಎಲ್ಲಾ ಗುಣಗಳಿರುವ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಅಂದ್ರೆ ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ ಚಂದ.
ರಾಘವ್ ಚಂದ ಮೋಸ್ಟ್ ಹ್ಯಾಂಡ್ಸಮ್ ಗಯ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಾರ್ಟೆಡ್ ಅಕೌಂಟೆಂಟ್ ಕಮ್ ರಾಜಕಾರಣಿ. ಸಾಕಷ್ಟು ಜನ ಹುಡುಗಿಯರು ಇವರನ್ನು ಮದುವೆಯಾಗಬೇಕೆಂದು ಹಿಂದೆ ಬಿದ್ದಿದ್ದಾರೆ. ಸಿಕ್ಕಾಪಟ್ಟೆ ಪ್ರಪೋಸಲ್ ಗಳು ಬರುತ್ತಿವೆಯಂತೆ. ಕೀರ್ತಿ ಠಾಕೂರ್ ಎಂಬ ಯುವತಿ, ನನ್ನನ್ನು ಮದುವೆಯಾಗುತ್ತೀರಾ ರಾಘು? ಎಂದು ಪ್ರಪೋಸ್ ಮಾಡಿದ್ದಾರೆ. ಅದಕ್ಕೆ ರಾಘವ್ ಕೊಟ್ಟ ಉತ್ತರ ನೆಟ್ಟಿಗರ ಮನ ಗೆದ್ದಿದೆ.
ಸಾರಿ ಕೀರ್ತಿ, ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿಗೆ . ಮದುವೆಯಾಗುವುದಕ್ಕೆ ಇದು ಸೂಕ್ತ ಸಮಯವಲ್ಲ. ಅಚ್ಚೇ ದಿನ ಬಂದ ಮೇಲೆ ಮದುವೆಯಾಗೋಣ ಎಂದು ಉತ್ತರ ಕೊಟ್ಟಿದ್ದಾರೆ. ರಾಘವ್ ಚಂದ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ, ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಈ ರೀತಿಯಾಗಿ ಟಾಂಗ್ ಕೊಟ್ಟಿದ್ದಾರೆ.
ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ರಾಘವ್ ಯಾವಾಗಲೂ ಕಟುವಾಗಿ ಟೀಕಿಸುತ್ತಿರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.