
ಹೈದರಾಬಾದ್(ಆ.24): ಕೆಲಸ ಕೊಡಿಸುವ ನೆಪದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 600 ಯುವತಿಯರನ್ನು ಯಾಮಾರಿಸಿ ಅಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿದ್ದ ಟೆಕ್ಕಿಯೋರ್ವನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ಕ್ಲೆಮೆಂಟ್ ರಾಜ್ ಅಲಿಯಾಸ್ ಪ್ರದೀಪ್ ಎಂಬ ಟೆಕ್ಕಿ, ಕರ್ನಾಟಕ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗಿ ಕೊಡಿಸುವ ನೆಪದಲ್ಲಿ ಅವರನ್ನು ಬೆತ್ತಲೆಗೊಳಿಸಿ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. .
ಸುಂದರವಾದ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ತಮ್ಮ ಹಿರಿಯ ಅಧಿಕಾರಿ ಆದೇಶಿಸಿದ್ದು, ನಿಮ್ಮ ಸುಂದರ ದೇಹದ ವಿಡಿಯೋವನ್ನು ಕಳುಹಿಸುವಂತೆ ಪ್ರದೀಪ್ ಯುವತಿಯರನ್ನು ಕೇಳುತ್ತಿದ್ದ. ಬಳಿಕ ಅವರ ವಾಟ್ಸಪ್ ನಂಬರ್ ಪಡೆದು ತಾನೇ ಖುದ್ದಾಗಿ ವಿಡಿಯೋ ಕಾಲ್ ಮಾಡಿ ಅಶ್ಲೀಲ ವಿಡಿಯೋ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ.
ಅದರಂತೆ ಪ್ರದೀಪ್ ಇತ್ತೀಚಿಗೆ ಯುವತಿಯೋರ್ವಳಿಗೆ ಕರೆ ಮಾಡಿ ವಾಟ್ಸಪ್'ನಲ್ಲಿ ಅಶ್ಲೀಲ ವಿಡಿಯೋಗೆ ಬೇಡಿಕೆ ಇಟ್ಟಿದ್ದ. ಆದರೆ ಈತನ ಮೋಸವನ್ನು ಅರಿಯತ ಯುವತಿ ಪೊಲೀಸರಿಗೆ ದೂರು ನೀಡಿದ್ದರಿಂದ ಇದೀಗ ಪ್ರದೀಪ್ ಕಂಬಿ ಎಣಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.