ಆಮೀರ್ ಖಾನ್'ಗೆ ಪ್ರಶಸ್ತಿ ಪ್ರದಾನ ಮಾಡಿದ ಮೋಹನ್ ಭಾಗವತ್

By Suvarna Web DeskFirst Published Apr 25, 2017, 8:41 AM IST
Highlights

75ನೇ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ದಂಗಲ್ ಸಿನಿಮಾದ ಪಾತ್ರಕ್ಕಾಗಿ ವಿಶೇಷ ಪುರಸ್ಕಾರವನ್ನು ಆಮೀರ್ ಖಾನ್'ಗೆ ನೀಡಲಾಯಿತು.

ಮುಂಬೈ(ಏ.25): ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿ ಹಿಂದುತ್ವ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ನಟ  ಆಮೀರ್ ಖಾನ್'ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶಸ್ತಿ ಪ್ರದಾನ ಮಾಡಿದರು.

75ನೇ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ದಂಗಲ್ ಸಿನಿಮಾದ ಪಾತ್ರಕ್ಕಾಗಿ ವಿಶೇಷ ಪುರಸ್ಕಾರವನ್ನು ಆಮೀರ್ ಖಾನ್'ಗೆ ನೀಡಲಾಯಿತು.

ಆಮೀರ್ ಸಾಮಾನ್ಯವಾಗಿ ಯಾವುದೇ ಸಾರ್ವಜನಿಕ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ, ಆದರೆ ಸುಮಾರು 16 ವರ್ಷಗಳ ಬಳಿಕ ಪ್ರಶಸ್ತಿ ಸ್ವೀಕರಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. (ಆಮೀರ್ ಖಾನ್ ಈ ಹಿಂದೆ ಕಡೆಯ ಬಾರಿ ಲಗಾನ್ ಸಿನಿಮಾ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್'ಗೆ ನಾಮನಿರ್ದೇಶನಗೊಂಡಾಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.)

2015ರಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಆಮೀರ್, ಕೆಲವು ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆಮೀರ್ ಒಬ್ಬ ದೇಶದ್ರೋಹಿ, ಅವರ ಸಿನಿಮಾಗಳಿಗೆ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಲಾಗಿತ್ತು.

click me!