
ಚಂಡಿಘರ್(ನ.21): ಈ ಹಿಂದೆ ಅಸಹಿಷ್ಣುತೆ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿ ಮಾಧ್ಯಮ ಹಾಗೂ ಜನ ಸಾಮಾನ್ಯರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ, ನಿರ್ಮಾಪಕ ಅಮೀರ್ ಖಾನ್, ಸದ್ಯ ನೋಟು ನಿಷೇಧದ ಕುರಿತು ತುಟಿ ಬಿಚ್ಚಿದ್ದಾರೆ.
ಇಂದು ನಡೆದ ಹರ್ಯಾಣದಲ್ಲಿ ಕುಸ್ತಿಪಟು ಮಹಾವೀರ್‌ಸಿಂಗ್‌ಪೋಗಟ್ ಪುತ್ರಿ ಕುಸ್ತಿಪಟು ಗೀತಾ ಫೋಗಟ್ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡ ಅಮೀರ್ ಖಾನ್, ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಕೇಂದ್ರ ಸರಕಾರದ ನಿರ್ಧಾರದ ಕುರಿತು ಯಾವುದೇ ರೀತಿಯಲ್ಲೂ ತಾವು ಮಾತನಾಡುವುದಿಲ್ಲ ಎಂದಿದ್ದು, ಅಲ್ಲದೇ ಇದೇ ಸಂದರ್ಭದಲ್ಲಿ ಪತ್ರಕರ್ತರು ನೋಟ್ ಬ್ಯಾನ್‍ನ ಸಮಸ್ಯೆ ಕುರಿತು ಪ್ರಶ್ನಿಸಿದಾಗ, ನನ್ನ ವ್ಯವಹಾರಗಳು ಬ್ಯಾಂಕಿನ ಮೂಲಕವೇ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ತೊಂದರೆ ಅನುಭವಿಸಿಲ್ಲ ಎಂದು ಉತ್ತರಿಸಿದ್ದಾರೆ.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಅಮೀರ್ ಅಭಿನಯದ ದಂಗಲ್ ಸಿನಿಮಾ ಕುಸ್ತಿಪಟು ಮಹಾವೀರ್‌ಸಿಂಗ್‌ಪೋಗಟ್‌ಅವರ ಜೀವನ ಆಧಾರಿತ ಕತೆಯಾಗಿದೆ. ಚಿತ್ರದಲ್ಲಿ ಗೀತಾ ಪೋಗಟ್ ಮತ್ತು ಬಬಿತಾ ಕುಮಾರಿ ಜೀವನವನ್ನು ತೋರಿಸಲಾಗಿದೆ. ಈ ಹಿನ್ನಲೆಯಲ್ಲಿ ದಂಗಲ್ ಸಿನಿಮಾ ಗೀತಾ ಮದುವೆಗೆ ಗಿಫ್ಟ್ ಎಂದಿದ್ದಾರೆ ಅಮೀರ್ ಖಾನ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.