ರೈಲ್ವೇ ಟಿಕೆಟ್ ಬುಕಿಂಗ್'ಗೆ ಆಧಾರ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

By Suvarna Web DeskFirst Published Aug 4, 2017, 7:39 PM IST
Highlights

ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿಂದು ಹೇಳಿದೆ.

ನವದೆಹಲಿ (ಆ.04): ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿಂದು ಹೇಳಿದೆ.

ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಇಲ್ಲ. ಹಿರಿಯ ನಾಗರೀಕರಿಗೆ ಟಿಕೆಟ್’ನಲ್ಲಿ  ರಿಯಾಯಿತಿ ನೀಡುವಾಗ ಐಚ್ಚಿಕ ಆಧಾರದ ಮೇಲೆ ಆಧಾರ್ ಕಾರ್ಡನ್ನು ಪರಿಚಯಿಸಲಾಗುತ್ತದೆ ಎಂದು  ಕೇಂದ್ರ ರಾಜ್ಯ ರೈಲ್ವೇ ಸಚಿವ ರಾಜೆನ್ ಗೋಹೈನ್ ರಾಜ್ಯಸಭೆಯಲ್ಲಿಂದು ಹೇಳಿದ್ದಾರೆ.

ಮರಣಪತ್ರಕ್ಕೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

click me!