
ಈಗಾಗಲೇ ನಿಧನರಾದವರ ಲಿಸ್ಟ್‌ನಲ್ಲಿ ನಮ್ಮ ಹೆಸರು ತಪ್ಪಾಗಿ ಸೇರಿದರೆ ಆಧಾರ್ ಕಾರ್ಡ್ ರದ್ದಾಗುತ್ತದೆ. ಮತ್ತೆ ಸಕ್ರಿಯಗೊಳಿಸೋದು ಹೇಗೆ ಅಂತ UIDAI ಹೇಳಿದೆ. ಮಾಹಿತಿ ತಪ್ಪಿದ್ದರೆ ಅಥವಾ ಮರಣ ನೋಂದಣಿಯಲ್ಲಿ ತಪ್ಪಾದರೆ ಹೀಗಾಗುತ್ತದೆ. ಹಾಗಾದರೆ ಯಾರು ಅರ್ಜಿ ಹಾಕಬಹುದು ಎಂಬ ಡೌಟ್ ನಿಮಗೆ ಇರಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.
ತಪ್ಪಾಗಿ ಆಧಾರ್ ರದ್ದಾಗಿದ್ರೆ ಹೀಗೆ ಮಾಡಿ:
ಅರ್ಜಿ ಸಲ್ಲಿಸಿ: ನಿಗದಿತ ಅರ್ಜಿ ನಮೂನೆಯಲ್ಲಿ ಹತ್ತಿರದ ಪ್ರಾದೇಶಿಕ/ರಾಜ್ಯ ಕಚೇರಿಗೆ ಪೋಸ್ಟ್/ಇಮೇಲ್/ನೇರವಾಗಿ ಅರ್ಜಿ ಸಲ್ಲಿಸಿ
ಬಯೋಮೆಟ್ರಿಕ್ ಮಾಹಿತಿ ಕೊಡಿ: ಅರ್ಜಿ ಸಿಕ್ಕಿದ ಮೇಲೆ, ಕಚೇರಿ ಅರ್ಜಿ ಪರಿಶೀಲಿಸಿ ಎರಡು ವಾರದಲ್ಲಿ ಆಧಾರ್ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಮಾಹಿತಿ (ಮುಖ, ಕಣ್ಣು, ಬೆರಳಚ್ಚು) ಕೊಡ್ಬೇಕು ಅಂತ ಹೇಳುತ್ತದೆ.
ಅರ್ಜಿ ನಿರ್ಧಾರ: 30 ದಿನದೊಳಗೆ ಅರ್ಜಿ ಬಗ್ಗೆ ನಿರ್ಧಾರ ಆಗುತ್ತೆ. SMS ಮೂಲಕವೂ ತಿಳಿಸುತ್ತಾರೆ. 'myAadhaar' ಪೋರ್ಟಲ್‌ನಲ್ಲೂ ನೋಡಬಹುದು.
ಜನನ-ಮರಣ ನೋಂದಣಿಗೆ ಮಾಹಿತಿ: ಆಧಾರ್ ಸಕ್ರಿಯಗೊಳಿಸಿದ ಮೇಲೆ, ಜನನ-ಮರಣ ನೋಂದಣಿ ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ ಮಾಹಿತಿ ಕಳಿಸುತ್ತಾರೆ.
ಆಧಾರ್ ಸಕ್ರಿಯಗೊಳಿಸಲು ಬೇಕಾದ ಮಾಹಿತಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.