
ಆಧಾರ್ ಹಾಗೂ ಅದರ ಹೇರುವಿಕೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಆಧಾರ್ ಬಳಕೆದಾರರ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಿರುವ ಇನ್ನೊಂದು ಘಟನೆ ವರದಿಯಾಗಿದೆ.
ಎನ್'ಡಿಟಿವಿ ಪ್ರಕಟಿಸಿರುವ ವರದಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಈ ಸೋರಿಕೆ ನಡೆದಿದೆ. ಇದನ್ನು ಒಂದು ತಿಂಗಳ ಹಿಂದಯೇ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಈವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ.
ಸಂಸ್ಥೆಯ ಎಡವಟ್ಟಿನಿಂದಾಗಿ ಕೇವಲ ಅದರ ಸೇವೆಯನ್ನು ಪಡೆದ ಬಳಕೆದಾರರದ್ದು ಮಾತ್ರವಲ್ಲ, ಇತರ ಆಧಾರ್ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ಸಂಸ್ಥೆಯು ಏಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್)ಯನ್ನು ಸುರಕ್ಷಿತಗೊಳಿಸಿರದ ಕಾರಣ ಎಲ್ಲಾ ಆಧಾರ್ ಬಳಕೆದಾರರ ಮಾಹಿತಿಯು ಅಸುರಕ್ಷಿತವಾಗಿದೆ.
ಬಳಕೆದಾರರ ವೈಯುಕ್ತಿಕ ಮಾಹಿತಿಯ ಜೊತೆ, ಅವರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಸೋರಿಕೆಯಾದ ಮಾಹಿತಿಯು ಒಳಗೊಂಡಿದೆಯೆನ್ನಲಾಗಿದೆ.
ZDNet ವರದಿಯ ಪ್ರಕಾರ, ದೆಹಲಿಯ ಮಾಹಿತಿ ಸುರಕ್ಷತಾ ತಜ್ಞ ಕರಣ್ ಸೈನಿ ಈ ಸೋರಿಕೆಯನ್ನು ಕಂಡುಹಿಡಿದಿದ್ದಾರೆ. ಆದರೆ ಅದು ಯಾವ ಸರ್ಕಾರೊ ಸಂಸ್ಥೆಯೆಂಬುವುದನ್ನು ಅವರು ಬಹಿರಂಗಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.