
ತಿರುವನಂತಪುರ(ಮಾ.24): ಉತ್ತರ ಕೇರಳದ 15 ಯುವಕರನ್ನು ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್'ಗೆ ಸೇರಲು ಸಹಾಯ ಮಾಡಿದ ಆರೋಪಕ್ಕಾಗಿ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯ ಮಹಿಳೆಯೊಬ್ಬರಿಗೆ 7 ವರ್ಷ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿದೆ.
ಯಾಸ್ಮೀನ್ ಅಹಮದ್ ಜೈಲು ಸೇರಿದ ಮಹಿಳೆ. ಕೇರಳದಲ್ಲಿ ಐಎಸ್ ಸಂಬಂಧಿತ ಪ್ರಕರಣಗಳಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣವಾಗಿದೆ. 2016ರಲ್ಲಿ ತಮ್ಮ ಮಗನ ಜೊತೆ ದೇಶ ಬಿಡುವ ಸಂದರ್ಭದಲ್ಲಿ ಈಕೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ಮುನ್ನ 52 ಆಪಾದಿತ ಹಾಗೂ ಒಂದು ಪ್ರತಿವಾದಿ ಹೇಳಿಕೆಗಳ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪಡೆಯಲಾಗಿತ್ತು. ಇದರಿಂದ ಈಕೆ ದೇಶದ ವಿರುದ್ಧ ಯುದ್ಧ ಸಾರುವ ಅಪರಾಧಿ ಎಂದು ತಿಳಿದುಬಂದಿದೆ. ಈಕೆ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಕಾಣೆಯಾದ ಕೇರಳ ಯುವಕನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.